May 23, 2026
file83l3qk1fftvz2yc2fxc.jpg

ಚಿತ್ರದುರ್ಗಮೇ.23:
ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ (CEPMIZ) ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಒಟ್ಟು 187 ಗಣಿಬಾಧಿತ/ಪ್ರಭಾವಕ್ಕೊಳಗಾದ ಗ್ರಾಮಗಳಲ್ಲಿ ಸ್ವಸಹಾಯ ಗುಂಪಿನ ಸದಸ್ಯತ್ವ ಹೊಂದಿರುವ ಮಹಿಳಾ ಫಲಾನುಭವಿಗಳಿಗೆ ಹೈನುರಾಸು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಪರಿಶಿಷ್ಟ ಜಾತಿಯ 339, ಪರಿಶಿಷ್ಟ ಪಂಗಡದ 137 ಮತ್ತು ಸಾಮಾನ್ಯ ವರ್ಗದ 2703 ಸೇರಿದಂತೆ ಒಟ್ಟು 3179 ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ.
ಕಡ್ಡಾಯವಾಗಿ ಜಿ.ಪಿ.ಎಲ್.ಎಫ್ ಮುಖಾಂತರ ಸ್ವಸಹಾಯ ಗುಂಪಿನ ಸದಸ್ಯತ್ವ ಹೊಂದಿರುವ ಮಹಿಳಾ ಫಲಾನುಭವಿಗೆ ಮಾತ್ರ ಒಂದು ಮಿಶ್ರತಳಿ ಹಸು/ಎಮ್ಮೆ ಮತ್ತು ಒಂದು ರಬ್ಬರ್ ನೆಲಹಾಸನ್ನು (HF/JR Cross breed/ Cow Mat) ಸಹಾಯಧನದೊಂದಿಗೆ ನೀಡಲಾಗುತ್ತದೆ.
ಒಂದು ಹಸು/ಎಮ್ಮೆ ಮತ್ತು ರಬ್ಬರ್ ನೆಲಹಾಸಿನ ಒಟ್ಟು ಬೆಲೆಯನ್ನು ರೂ. 63,000 ಗೆ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳಿಗೆ ಶೇ.90 ರಷ್ಟು ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಇನ್ನುಳಿದ ಮೊತ್ತವನ್ನು ಫಲಾನುಭವಿಯು ಸ್ವಂತ ವಂತಿಕೆ ರೂಪದಲ್ಲಿ ಅಥವಾ ಬ್ಯಾಂಕಿನಿಂದ ಸಾಲ ಪಡೆದು ಪಾವತಿ ಮಾಡಬೇಕಿರುತ್ತದೆ. ಈ ಯೋಜನೆಯಡಿ ಗಣಿಬಾಧಿತ ಗ್ರಾಮಗಳ ಆಸಕ್ತ ಸ್ವಸಹಾಯ ಗುಂಪಿನ ಸದಸ್ಯರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ತಮ್ಮ ಗ್ರಾಮ ಪಂಚಾಯಿತಿ ಜಿಪಿಎಲ್‍ಎಫ್ ಮುಖಾಂತರ ಸ್ಥಳೀಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸ್ಥಳೀಯ ಪಶು ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪಡೆದು ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಸ್ಥಳೀಯ ಪಶು ಆಸ್ಪತ್ರೆ/ಪಶು ಚಿಕಿತ್ಸಾಲಯಕ್ಕೆ ತ್ರಿ-ಪ್ರತಿಯಲ್ಲಿ ಸಲ್ಲಿಸಬೇಕು.
ಗಣಿಬಾಧಿತ/ಪ್ರಭಾವಕ್ಕೊಳಗಾದ ಅರ್ಹ 187 ಗ್ರಾಮಗಳ ಪಟ್ಟಿ ಇಂತಿದೆ. ಚಿತ್ರದುರ್ಗ ತಾಲ್ಲೂಕು (51 ಗ್ರಾಮಗಳು): 1) ಡಿ.ಮದಕರಿಪುರ 2) ಬೇಡರ ಬೊಮ್ಮೇನಹಳ್ಳಿ 3) ಬೊಮ್ಮವ್ವನಾಗತಿಹಳ್ಳಿ 4) ದಿಂಡದಹಳ್ಳಿ 5) ಕಡ್ಲೆಗುದ್ದು, 6) ಮಹದೇವನಕಟ್ಟೆ, 7) ಮರಿಜೋಗಿಹಳ್ಳಿ, 8) ಮೇಗಳಹಳ್ಳಿ 9) ಹೊರೆಕೆನಹಳ್ಳಿ, 10) ಜಂಪಣ್ಣನಹಳ್ಳಿ, 11) ಜಂಪನಹಟ್ಟಿ, 12) ವಡ್ಡರಹಟ್ಟಿ, 13) ಭೀಮಸಮುದ್ರ, 14) ಅನ್ನೆಹಾಳ್, 15) ಬೊಮ್ಮೇನಹಳ್ಳಿ, 16) ಪಾಳ್ಯ, 17) ಹುಲಗೇರಿ, 18) ಚಿಕ್ಕೇನಹಳ್ಳಿ, 19) ಎನ್.ಬಳ್ಳೆಕಟ್ಟೆ, 20) ರಾಮಾಪುರ, 21) ಕಕ್ಕೆಹರವು, 22) ದೊಡ್ಡಿಗನಾಳು, 23) ದೊಡ್ಡಿಗನಾಳು ಹೊಸಹಟ್ಟಿ, 24) ನೆಲ್ಲಿಕಟ್ಟೆ, 25) ತುರೆಬೈಲು, 26) ವೀರವ್ವ ನಾಗತಿಹಳ್ಳಿ, 27) ವ್ಯಾಸಮಲ್ಲಾಪುರ, 28) ಹಿರೇಗುಂಟನೂರು, 29) ಹಿರೇಗುಂಟನೂರು ಗೊಲ್ಲರಹಟ್ಟಿ, 30) ಸಿದ್ಧಾಪುರ, 31) ಹುಣಸೇಕಟ್ಟೆ ಗೊಲ್ಲರಹಟ್ಟಿ, 32) ಹುಣಸೆಕಟ್ಟೆ, 33) ಕೊಣನೂರು, 34) ಮಳಲಿ, 35) ಸೊಡೇಕೋಳ, 36) ಮುಸಂದಿಹಾಳ್, 37) ಗೊಡಬನಾಳು, 38) ದೊಡ್ಡಾಪುರ, 39) ವಡ್ಡರ ಸಿದ್ದವ್ವನಹಳ್ಳಿ, 40) ಅಲಗಘಟ್ಟ, 41) ಸಿರಿಗೆರೆ, 42) ದ್ಯಾಮವ್ವನಹಳ್ಳಿ, 43) ಬೆಟ್ಟದ ನಾಗೇನಹಳ್ಳಿ, 44) ಜಮ್ಮೇನಹಳ್ಳಿ, 45) ಕೊಡೆಗೆಹಳ್ಳಿ, 46) ದೇವಾಪುರದಹಟ್ಟಿ, 47) ಪಂಡರಹಳ್ಳಿ, 48) ರೊಟ್ಟಿಹಳ್ಳಿ, 49) ಪಾಲಕಿಹಳ್ಳಿ, 50) ಚಿಕ್ಕಗುಂಟನೂರು, 51) ಚಿಕ್ಕಲಗಟ್ಟಾ.
ಹೊಳಲ್ಕೆರೆ ತಾಲ್ಲೂಕು (72 ಗ್ರಾಮಗಳು): 1) ಚೌಡೇನಹಳ್ಳಿ ಅರಣ್ಯ, 2) ಹಿರೇಕಂದವಾಡಿ, 3) ಕೇಶವಾಪುರ, 4) ಲಿಂಗದೇವರಹಳ್ಳಿ, 5) ಸಾದರಹಳ್ಳಿ, 6) ತಣಿಗೇನಹಳ್ಳಿ, 7) ಬೋರನಹಳ್ಳಿ, 8) ಕಸವನಹಳ್ಳಿ, 9) ಮತ್ತಿಘಟ್ಟ, 10) ಶಂಕರನಹಳ್ಳಿ, 11) ಅರಸಿನಘಟ್ಟ, 12) ಗೂಳಿಹೊಸಹಳ್ಳಿ, 13) ಹನುಮನಕಟ್ಟೆ, 14) ಕುಮ್ಮನಘಟ್ಟ, 15) ರಾಮೇನಹಳ್ಳಿ, 16) ಶ್ಯಾನುಭೋಗನಹಳ್ಳಿ, 17) ಚಿಕ್ಕಂದವಾಡಿ, 18) ಬ್ರಹ್ಮಪುರ, 19) ಪಂಪಾಪುರ, 20) ದಾವನಹಳ್ಳಿ, 21) ಬಸವಪುರ, 22) ಬುದಿಪುರ, 23) ಕನ್ನೇನಹಳ್ಳಿ, 24) ಬಂಜಗೊಂಡನಹಳ್ಳಿ, 25) ಮಾಕುಂಟೆ, 26) ತ್ಯಾಗದಹಳ್ಳಿ ಅರಣ್ಯ, 27) ಗುಂಡಿಕೆರೆ, 28) ಗೊಂದಿಹಳ್ಳಿ, 29) ಗರಗ, 30) ಹರಕೆದೇವರಪುರ, 31) ಮಾಳಿಗೇರನಹಳ್ಳಿ, 32) ಕಾಗಳಗೆರೆ, 33) ಚಿಕ್ಕಜಾಜೂರು ಕಾವಲು, 34) ಕಾಶೀಪುರ, 35) ಕಣಿವೆಜೋಗಿಹಳ್ಳಿ, 36) ಕಲ್ಲವ್ವ ನಾಗತಿಹಳ್ಳಿ, 37) ನಂದಿಹಳ್ಳಿ, 38) ಕೊಂಡಾಪುರ, 39) ಹಾಲೇನಹಳ್ಳಿ, 40) ಕೆರೆಯಾಗಲಹಳ್ಳಿ, 41) ಗೌರಿಪುರ, 42) ಅಪ್ಪರಸನಹಳ್ಳಿ, 43) ಕಣಿವೆಹಳ್ಳಿ, 44) ಅಮೃತಾಪುರ, 45) ಗುಂಜಿಗನೂರು, 46) ಹರಳಿಕೆರೆ, 47) ಕುಮಾರನಹಳ್ಳಿ, 48) ಗೊಪ್ಪೇನಹಳ್ಳಿ, 49) ಇಚ್ಛಘಟ್ಟ, 50) ನಂದನ ಹೊಸೂರು, 51) ನಾಗರಘಟ್ಟ, 52) ವುಡಗೆರೆ, 53) ಅರೇನಹಳ್ಳಿ, 54) ನೆಲ್ಲಿಕಟ್ಟೆ, 55) ಉಪ್ಪರಿಗೇನಹಳ್ಳಿ, 56) ಚಿಕ್ಕಜಾಜೂರು, 57) ಗಿಡ್ಡಣ್ಣನಹಳ್ಳಿ, 58) ತೇಕಲವಟ್ಟಿ, 59) ಗಿಳಿಕೇನಹಳ್ಳಿ, 60) ಗರಗದ ಅರಣ್ಯ, 61) ಚನ್ನಪಟ್ಟಣ, 62) ತಿರುಮಲಾಪುರ, 63) ಸಂಗೇನಹಳ್ಳಿ, 64) ಎಸ್.ಐ.ದಾಸರಹಳ್ಳಿ, 65) ರಂಗಸಮುದ್ರ, 66) ಕೊಳಲು, 67) ಗಟ್ಟಿಹೊಸಹಳ್ಳಿ, 68) ರಂಗವ್ವನಹಳ್ಳಿ, 69) ಭರಮಣ್ಣನಾಯಕದುರ್ಗ, 70) ಲಿಂಗದಹಳ್ಳಿ, 71) ಮುತ್ತುಗದೂರು, 72) ಗೊಲ್ಲರಹಳ್ಳಿ.
ಹೊಸದುರ್ಗ ತಾಲ್ಲೂಕು (64 ಗ್ರಾಮಗಳು): 1) ಕೆಂಚಿಹಳ್ಳಿ, 2) ಸಣ್ಣಕಿಟ್ಟದಹಳ್ಳಿ, 3) ಲಕ್ಕಿಹಳ್ಳಿ, 4) ಕೆಂಕೆರೆ, 5) ರಾಮಜ್ಜನಹಳ್ಳಿ ಕಾವಲು, 6) ಎಂ.ಮಲ್ಲಾಪುರ, 7) ಕುದುರೆ ಕಣಿವೆ ಅರಣ್ಯ, 8) ಕಾಂಚೀಪುರ, 9) ಮುಗಿಲೋಡು, 10) ದೊಡ್ಡಬ್ಯಾಲದಕೆರೆ, 11) ನಾಕಿಕೆರೆ, 12) ಚಿಕ್ಕಬ್ಯಾಲದಕೆರೆ, 13) ಹೊತ್ತರಗೊಂಡನಹಳ್ಳಿ, 14) ಜಯಸುವರ್ಣಪುರ, 15) ದೊಡ್ಡಕಿಟ್ಟದಹಳ್ಳಿ, 16) ಸಿದ್ದಗೊಂಡನಹಳ್ಳಿ, 17) ಬ್ಯಾಡರಹಳ್ಳಿ, 18) ಮಡದಕೆರೆ, 19) ಬೇವಿನಹಳ್ಳಿ, 20) ಸೇವಾನಗರ, 21) ಹನುಮನಹಳ್ಳಿ, 22) ಚಿಕ್ಕತೇಕಲವಟ್ಟಿ, 23) ಅತಿಮೊಗ್ಗೆ, 24) ಬುಕ್ಕಸಾಗರ, 25) ಜನಕಲ್, 26) ಶೀರನಕಟ್ಟೆ, 27) ನಾಗನಾಯಕನಕಟ್ಟೆ, 28) ಗ್ರಂಥಪುರ, 29) ಮತ್ತೋಡು, 30) ಕಪ್ಪನಾಯಕನಹಳ್ಳಿ, 31) ಬಾಲೇನಹಳ್ಳಿ, 32) ಗೊಲ್ಲರಹಳ್ಳಿ, 33) ಅಯ್ಯನಹಳ್ಳಿ, 34) ಜೋಗಿಹಳ್ಳಿ (ಬೋಗಿಹಳ್ಳಿ), 35) ಬಂಡಿಹಳ್ಳಿ, 36) ಕಗ್ಗಲಕಟ್ಟೆ, 37) ಗೊಲ್ಲರಹಳ್ಳಿ, 38) ಕಿಟ್ಟದಾಳು, 39) ಮಂಗಸಂದ್ರ, 40) ಕಡವಿಗೆರೆ, 41) ರಂಗವ್ವನಹಳ್ಳಿ, 42) ದೊಡ್ಡತೇಕಲವಟ್ಟಿ, 43) ಅರೇಹಳ್ಳಿ, 44) ಚಿಕ್ಕಹುಲ್ಲೇನಹಳ್ಳಿ, 45) ಹೆಗ್ಗೆರೆ, 46) ಹರೇನಹಳ್ಳಿ, 47) ನಾಗತಿಹಳ್ಳಿ, 48) ವೆಂಗಲಾಪುರ, 49) ದೊಡ್ಡಕರ್ಪೂರದಕಟ್ಟೆ, 50) ಹುಲ್ಲುಕಟ್ಟೆ, 51) ಬಚಾವರ, 52) ಜೆ.ಐ.ತರೀಕೆರೆ, 53) ಚಿಕ್ಕತೇಕಲವಟ್ಟಿ ತುಂಡು ಕಾವಲು, 54) ಸಾದರಹಳ್ಳಿ, 55) ಕಾನುಬೇನಹಳ್ಳಿ, 56) ಕಚಾಪುರ, 57) ತಣಿಗೆಕಲ್ಲು, 58) ಗಿರಿಯಾಪುರ, 59) ಕೈನಾಡು ವಳಗೆರೆ ಕಾವಲ್, 60) ಮಸಾನಿಹಳ್ಳಿ, 61) ಚಿಕ್ಕಕರ್ಪೂರದಕಟ್ಟೆ, 62) ಅಗಸರಹಳ್ಳಿ, 63) ವೀರವ್ವನಾಗತಿಹಳ್ಳಿ, 64) ಕಪ್ಪಗೆರೆ ಗ್ರಾಮಗಳು ಗಣಿಬಾಧಿತ/ಪ್ರಭಾವಕ್ಕೊಳಗಾದ ಗ್ರಾಮಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಜಿ.ಇಂದಿರಾಬಾಯಿ-9482943111, ಹೊಳಲ್ಕೆರೆ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರಂಗಸ್ವಾಮಿ-9972965479, ಹೊಸದುರ್ಗ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸಿ.ಶಿವಪ್ಪ-9449783775 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಚಿತ್ರದುರ್ಗ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಸಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
=========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading