ಅಕ್ಟೋಬರ್ 23 ರಿಂದ 27ರವರೆಗೆ ತಳಕು ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ತಳಕು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಹಾಲಿ ಇರುವ 6.3ಎಂ.ವಿ.
ಎ ಶಕ್ತಿ ಪರಿವರ್ತಕವನ್ನು 12.5 ಎಂ.ವಿ.ಎ. ಶಕ್ತಿ ಪರಿವರ್ತಕದೊಂದಿಗೆ ಉನ್ನತೀಕರಿಸುವ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ಹಾಲಿ ಇರುವ 12.5.ಎಂ.ವಿ.ಎ ಪರಿವರ್ತಕ ಒಂದರಿಂದ ಹಾಲಿ ಇರುವ ವೇಳಾಪಟ್ಟಿಯಂತೆ ಐಪಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿರುವುದಿಲ್ಲವೆಂದು ಸದರಿ ದಿನಾಂಕಗಳಲ್ಲಿ ಐಪಿ ಮಾರ್ಗಗಳಿಗೆ ಬದಲಿ ವ್ಯವಸ್ಥೆಯ ವೇಳೆ ಪಟ್ಟಿಯಲ್ಲಿ ವಿದ್ಯುತ್ ಸರಬರಾಜು ಪೂರೈಸಲಾಗುವುದು ಎಂದು ಸಹಾಯಕ ಇಂಜಿನಿಯರ್ (ವಿ) ತಳಕು ವಿವಿ ಕೇಂದ್ರ ರವರು ತಿಳಿಸಿರುತ್ತಾರೆ ಆದ್ದರಿಂದ ಎನ್.ಜೆ.ವೈ ಮಾರ್ಗಗಳಲ್ಲಿ ಉಂಟಾಗಬಹುದಾದ ಅಡಚಣೆಗೆ ಹಾಗೂ ಬದಲಿ ವ್ಯವಸ್ಥೆಯ ವೇಳಾಪಟ್ಟಿಗೆ ಗ್ರಾಹಕರು ರೈತರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್( ವಿ) ಕಾರ್ಯ ಮತ್ತು ಪಾಲನ ಉಪ ವಿಭಾಗ ಎಂ .ಜಿ. ಮಮತಾ, ಹಾಗೂ ತಳಕು ಶಾಖಾಧಿಕಾರಿ ಎನ್. ಬಿ. ಬೋರಣ್ಣ ಅವರು ಪತ್ರಿಕಾ ಪ್ರಕಟದಲ್ಲಿ ತಿಳಿಸಿದ್ದಾರೆ.
ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು ತಳಕು 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಗಳು,/ ಪ್ರದೇಶಗಳು. ತಳಕು, ಮೊನ್ನೆಕೋಟೆ, ತಿಮ್ಮಪ್ಪಯ್ಯನಹಳ್ಳಿ, ಎನ್. ದೇವರಹಳ್ಳಿ, ಹಾಗೂ ಘಟಪರ್ತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳು
About The Author
Discover more from JANADHWANI NEWS
Subscribe to get the latest posts sent to your email.
