October 19, 2026

ನಿಷ್ಕಳಂಕ ಮತ್ತು ಕ್ರಿಯಾಶೀಲ ವ್ಯಕ್ತಿಗಳು ಸಮಾಜಕ್ಕೆ ಆಸ್ತಿ ಇದ್ದಂತೆ ಎಂದು ಮೊಳಕಾಲ್ಮೂರು ಬಿಜೆಪಿ ಮುಖಂಡ ಎನ್ ರಘುಮೂರ್ತಿ ಹೇಳಿದರು.

ಭಾನುವಾರ ಮೊಳಕಾಲ್ಮುರು ಕ್ಷೇತ್ರದ ದೇವಸಮುದ್ರ ರಾಂಪುರ ಮತ್ತು ವಿಠಲಪುರ ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಶ್ರೀ ಸುರೇಶ್ ವರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿ ಅಭ್ಯರ್ಥಿಯಾದಂತ ಸುರೇಶ್ ಅವರು ಸರಳ ಸಜ್ಜನಿಕೆ ಮತ್ತು ಪ್ರಚಾರಿತ್ರವಂತ್ರು ಶೈಕ್ಷಣಿಕ ಸಂಸ್ಥೆಗಳನ್ನು ಹುಟ್ಟುಹಾಕಿ ಅದರ ಮುಖಾಂತರ ಸಾವಿರಾರು ಪದವೀಧರನ್ನು ಸಮಾಜಕ್ಕೆ ಪರಿಚಯಿಸಿದವರು ಸಮಾಜದ ಬದಲಾವಣೆಯ ಕನಸನ್ನು ಕಂಡಂತವರು ಇಂತಹ ವ್ಯಕ್ತಿಗಳು ಸಮಾಜಕ್ಕೆ ಆಸ್ತಿ ಇದ್ದಂತೆ

ನರೇಂದ್ರ ಮೋದಿಜಿ ಅವರ ವಿಕಸಿತ ಭಾರತದ ಕಲ್ಪನೆಯಲ್ಲಿ ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಬೇಕಿದೆ ದೇಶ ಸರ್ವಾಂಗೀಣ ಅಭಿವೃದ್ಧಿಯಲ್ಲಿ ದಾಪು ಗಾಲು ಇಡುತ್ತಿದೆ ಜಾಗತಿಕವಾಗಿ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಸ್ಐಆರ್ ಬಗ್ಗೆ ವಿರೋಧಪಕ್ಷಗಳು ಗೊಂದಲ ಮೂಡಿಸುತ್ತಿವೆ ಹೆಸರನ್ನು ಕೈ ಬಿಟ್ಟಿರುವ ಯಾವುದೇ ಭಾದಿತ ವ್ಯಕ್ತಿ ದೂರು ನೀಡಿಲ್ಲ ಚುನಾವಣಾ ಆಯೋಗ ನಿಷ್ಪಕ್ಷವಾಗಿ ಕೆಲಸ ನಿರ್ವಹಿಸುತ್ತಿದೆ
ಈ ಎಲ್ಲಾ ಆಧಾರದಲ್ಲಿ ಮುಂಬರುವ ದಿನಗಳಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಾವುದೇ ಸಂದೇಹವಿಲ್ಲ ಎಲ್ಲ ಪ್ರಜ್ಞಾವಂತ ಪದವಿದರು ಎಲ್ಲ ಪ್ರಜ್ಞಾವಂತ ಪದವೀಧರರು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಸುರೇಶ್ ರವರಿಗೆ ಮತನೀಡಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು ಶಿಕ್ಷಕರಾದಂತಹ ಮೃತ್ಯುಂಜಯಪ್ಪ ಮಂಜುನಾಥ್ ವಕೀಲ್ ರಾದ ಪ್ರದೀಪ್ ಬಾಬಣ್ಣ 150ಕ್ಕೂ ಹೆಚ್ಚು ಪದವೀಧರ ಮತದಾರರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading