October 16, 2026
IMG-20261016-WA0171

ಮೈಸೂರು:-
ನಂಜನಗೂಡು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 14, 2026ರಂದು ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಷ್ಟಗಿಯ ಶಿವಲೀಲಾ ಹಿರೇಮಠ ಹಾಗೂ ತಂಡ ಸುಗಮ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.

ನಾಡಿನ ಕಲೆ, ಸಾಹಿತ್ಯ ಹಾಗೂ ಸಂಗೀತ ಪರಂಪರೆಯ ಸೊಗಡನ್ನು ಬಿಂಬಿಸುವ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರು ತಮ್ಮ ಸುಮಧುರ ಕಂಠಸಿರಿಯಿಂದ ಸಂಗೀತ ರಸಿಕರನ್ನು ರಂಜಿಸಿದರು.
ಭಾವಪೂರ್ಣ ಗಾಯನ ಹಾಗೂ ವಾದ್ಯಗಳ ಮಧುರ ನಾದವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದಲ್ಲಿ ಶಿವಲೀಲಾ ಹಿರೇಮಠ, ಕಮಲಾಕ್ಷಿ ಹಿರೇಮಠ ಹಾಗೂ ವೆಂಕಟೇಶನಂ ಸಾಗರ ಅವರು ತಮ್ಮ ಸುಮಧುರ ಗಾಯನದ ಮೂಲಕ ಸಂಗೀತದ ರಸದೌತಣ ಉಣಬಡಿಸಿದರು. ಇವರಿಗೆ ಜಗ್ಗಣ್ಣ ಅವರು ತಬಲಾ ವಾದನದಲ್ಲಿ ಹಾಗೂ ಗುರುಕಿರಣ್ ಅವರು ಕೀಬೋರ್ಡ್ ವಾದನದಲ್ಲಿ ಅತ್ಯುತ್ತಮ ಸಂಗೀತ ಸಹಕಾರ ನೀಡಿದರು.
ಕಲಾವಿದರ ಮನಮೋಹಕ ಗಾಯನಕ್ಕೆ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಹಾಡುಗಳ ಪ್ರಸ್ತುತಿಯ ವೇಳೆ ಮೊಳಗಿದ ಕರತಾಡನವು ಕಲಾವಿದರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಪ್ರೇಕ್ಷಕರ ನಿರಂತರ ಚಪ್ಪಾಳೆ ಹಾಗೂ ಪ್ರೋತ್ಸಾಹವು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.
ನಾಡಹಬ್ಬ ಮೈಸೂರು ದಸರಾ ಮಹೋತ್ಸವದಂತಹ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಯಲ್ಲಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ ಕುಷ್ಟಗಿಯ ಕಲಾವಿದರು, ಸಂಗೀತದ ಮೂಲಕ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆದ ಈ ಸುಗಮ ಸಂಗೀತ ಕಾರ್ಯಕ್ರಮವು ಸಂಗೀತ ರಸಿಕರ ಮೆಚ್ಚುಗೆಗೆ ಪಾತ್ರವಾಗಿ, ದಸರಾ ಸಾಂಸ್ಕೃತಿಕ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿತು.

ಇವರು ಕುಷ್ಟಗಿ ತಾಲೂಕಿನ ಏಕೈಕ ಮಹಿಳಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಎಂದರೆ ಶಿವಲೀಲಾ ಹಿರೇಮಠ. ಇವರು ಕುಷ್ಟಗಿ ಯಲ್ಲೇ ಸಂಗೀತ ಪಾಠ ಶಾಲೆಯನ್ನು ಪ್ರಾರಂಭಿಸಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತವನ್ನು ದಾನ ಮಾಡಿದ್ದಾರೆ.ಇವರು ತಮ್ಮ ಚಿಕ್ಕ ವಯಸಿನಲ್ಲೇ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ದಾನ ಮಾಡಿದ್ದಾರೆ. ಇವರು ಹೀಗೆ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ದಾನ ಮಾಡುತ್ತ ಹೀಗೆ ದೊಡ್ಡಮಟ್ಟದಲ್ಲಿ ಬೆಳೆಯಲಿ ಎಂದು ಮೈಸೂರ್ ಬೆಟ್ಟದ ಚಾಮುಂಡೇಶ್ವರಿ ಆಶೀರ್ವದಿಸಲಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading