ಹಿರಿಯೂರು:
ಎಲ್.ನಿನೋ ಪ್ರಭಾವದಿಂದ ಹವಾಮಾನ ಬದಲಾವಣೆ, ಅನಿಯಮಿತಮಳೆ, ಹೆಚ್ಚುತ್ತಿರುವ ತಾಪಮಾನ ಹಾಗೂ ನೀರಿನ ಕೊರತೆಯಿಂದ ಕೃಷಿಕ್ಷೇತ್ರವು ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕಡಿಮೆ ನೀರಿನಲ್ಲಿಯೇ ಉತ್ತಮವಾಗಿ ಬೆಳೆಯುವ ಸಿರಿಧಾನ್ಯಗಳು ರೈತರಪಾಲಿಗೆ ಆಶಾಕಿರಣವಾಗಿ ಪರಿಣಮಿಸುತ್ತಿವೆ ಕೇಂದ್ರದ ಸಹ ಸಂಶೋಧನಾ ನಿರ್ಧೇಶಕರಾದ ಡಾ.ಧನಂಜಯ ತಿಳಿಸಿದ್ದಾರೆ.
ನಗರದ ಬಬ್ಬೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನವಣೆ ಮತ್ತು ಸಾಮೆಯದೇಶೀತಳಿಗಳು ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗೆ ಧೀರ್ಘ ಕಾಲದಿಂದ ಹೊಂದಿಕೊಂಡು ಬಂದಿರುವ ದೇಶೀತಳಿಗಳು ಬರಗಾಲದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಉತ್ತಮ ಬೆಳೆಸಾಮರ್ಥ್ಯವನ್ನು ತೋರಿಸುತ್ತಿರುವುದು ಗಮನಾರ್ಹವಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು ತಾಲ್ಲೂಕಿನ ರೈತರು ಸೆಪ್ಟಂಬರ್ ತಿಂಗಳ ಕೊನೆಯವರೆಗೂ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂಬುದಾಗಿ ಮಾಧ್ಯಮಗಳ ಮೂಲಕ ಮಾಹಿತಿ ನೀಡಿದ್ದಾರೆ.
ಹಿರಿಯೂರಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನವಣೆ ಮತ್ತು ಸಾಮೆಯದೇಶೀತಳಿಗಳ ಮೇಲೆ ಕೈಗೊಂಡಿರುವ ಪ್ರಾಯೋಜನೆಯಡಿ ಬೆಳೆಸಲಾಗಿರುವ ವಿವಿಧ ದೇಶೀತಳಿಗಳು ಪ್ರಸಕ್ತ ತೀವ್ರ ಬರಪರಿಸ್ಥಿತಿಯ ನಡುವೆಯೂ ಉತ್ತಮ ಬೆಳವಣಿಗೆ ತೋರಿಸಿದ್ದು, ಸಿರಿಧಾನ್ಯಗಳ ಹವಾಮಾನ-ಚೇತರಿಕೆಯ ಸಾಮರ್ಥ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿವೆ.
ಕಡಿಮೆ ಮಳೆಯಲ್ಲಿಯೂ ಬೆಳೆಯುವ ಸಾಮರ್ಥ್ಯ, ಕಡಿಮೆ ನೀರಿನ ಅವಶ್ಯಕತೆ, ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಗುಣ, ಕಡಿಮೆ ಒಳಹರಿವಿನಲ್ಲಿ ಕೃಷಿಮಾಡಲು ಸಾಧ್ಯವಾಗುವುದು ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಬೆಳೆನೀಡುವ ಸಾಮರ್ಥ್ಯದಿಂದಾಗಿ ಸಿರಿಧಾನ್ಯಗಳು ಭವಿಷ್ಯದ ಸುಸ್ಥಿರ ಕೃಷಿಯಲ್ಲಿ ಪ್ರಮುಖ ಪಾತ್ರವಹಿಸಲಿವೆ ಎಂದು ಕೃಷಿವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ನವಣೆ, ಸಾಮೆ, ಬರಗು, ಹಾರಕ, ಊದಲು, ರಾಗಿ ಸೇರಿದಂತೆ ವಿವಿಧ ಸಿರಿಧಾನ್ಯಗಳು ಬರಪೀಡಿತ ಪ್ರದೇಶಗಳಲ್ಲಿ ರೈತರಿಗೆ ಪರ್ಯಾಯ ಬೆಳೆಗಳಾಗಿ ನೆರವಾಗುವುದರ ಜೊತೆಗೆ ಪೌಷ್ಟಿಕ ಆಹಾರದ ಮೂಲವಾಗಿಯೂ ಮಹತ್ವಪಡೆದಿವೆ. ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆ ಹಾಗೂ ತೀವ್ರ ಬರಪರಿಸ್ಥಿತಿ ಕಂಡು ಬಂದಿದ್ದರೂ, ಸಂಶೋಧನಾ ತಾಕುಗಳಲ್ಲಿ ಈದೇಶೀತಳಿಗಳು ಉತ್ತಮವಾಗಿ ಬೆಳೆದಿರುವುದು ವಿಶೇಷ ಗಮನಸೆಳೆದಿದೆ.
ಈಹಿನ್ನೆಲೆಯಲ್ಲಿಹಿರಿಯೂರಿನವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ, ಬಬ್ಬೂರು ಫಾರಂ, ಹಿರಿಯೂರುನಲ್ಲಿ 53 ನವಣೆ ಮತ್ತು 16 ಸಾಮೆ ದೇಶೀತಳಿಗಳ ಗುಣಲಕ್ಷಣಗಳ ನಿರೂಪಣೆ ಮತ್ತು ಮೌಲ್ಯಮಾಪನ ಯೋಜನೆಯಡಿ ವಿವಿಧದೇಶೀತಳಿಗಳನ್ನು ಸಂಗ್ರಹಿಸಿ, ಅವುಗಳಬೆಳವಣಿಗೆ, ಸಸ್ಯದ ಗುಣಲಕ್ಷಣಗಳು, ಬೆಳೆ ಅಭಿವ್ಯಕ್ತಿ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅವುಗಳ ಕಾರ್ಯಕ್ಷಮತೆಯನ್ನು ಅಧ್ಯಯನ ಮಾಡಲಾಗುತ್ತಿದೆ.
ದೇಶದ ವಿವಿಧಪ್ರದೇಶಗಳಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆಗಳು ಹಾನಿಗೊಳಗಾಗುತ್ತಿರುವ ಈ ಸಂದರ್ಭದಲ್ಲಿ ಹಿರಿಯೂರಿನ ಸಂಶೋಧನಾ ತಾಕುಗಳಲ್ಲಿ ದೇಶೀನವಣೆ ಮತ್ತು ಸಾಮೆತಳಿಗಳು ಉತ್ತಮ ಬೆಳೆಅಭಿವ್ಯಕ್ತಿ ತೋರಿಸಿರುವುದು ಸಂಶೋಧಕರು ಮತ್ತು ರೈತರಲ್ಲಿ ಹೊಸನಿರೀಕ್ಷೆ ಮತ್ತು ಭರವಸೆಯನ್ನು ಮೂಡಿಸಿದೆ.
ದೇಶೀತಳಿಗಳ ಈಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ರಾಜ್ಯಮಟ್ಟದಮೇಲ್ವಿಚಾರಣಾತಂಡವು ಹಿರಿಯೂರಿನ ಸಂಶೋಧನಾ ತಾಕುಗಳಿಗೆ ಭೇಟಿನೀಡಿ ಬೆಳೆಗಳ ಪ್ರಗತಿಯನ್ನು ಪರಿಶೀಲಿಸಿದ ಡಾ.ಮೋಹನ್ ನಿವೃತ್ತ ಪ್ರಾಧ್ಯಾಪಕರು ಹಾಗೂತಾಂತ್ರಿಕ ಸಲಹೆಗಾರರು, ದೇಶೀ ತಳಿಗಳ ಪ್ರಾಯೋಜನೆ, ಕೃಷಿ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು ಹಾಗೂ ಡಾ.ರಮೇಶ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಕೃಷಿ ವಿವಿ ಬೆಂಗಳೂರು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಸಂಶೋಧನಾನ ನಿರ್ಧೇಶಕರಾದ ಡಾ.ಶ್ರೀಧರ್ ಎಸ್, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ, ಬಬ್ಬೂರು ಫಾರಂ, ಹಿರಿಯೂರು ಕೇಂದ್ರದ ಸಹ ಸಂಶೋಧನಾ ನಿರ್ಧೇಶಕರಾದ ಡಾ.ಧನಂಜಯ, ಬಿ.ಸಿರಿಧಾನ್ಯ ಬೆಳೆಗಳ ಪ್ರಧಾನ ಸಂಶೋಧಕರಾದ ಡಾ.ನಂದಿನಿಸಿ, ಸಹಾಯಕ ಕೃಷಿ ನಿರ್ಧೇಶಕರಾದ ಈಶಾ, ಮಿಥುನ್ಹಾಗೂರಜನೀಕಾಂತ್, ಹಾಗೂವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ, ಬಬ್ಬೂರು ಫಾರಂ, ಹಿರಿಯೂರು ಕೇಂದ್ರದ ವಿಜ್ಞಾನಿಗಳಾದ ಡಾ.ಕುಮಾರ್ ನಾಯಕ್, ಡಾ. ರಾಜಶೇಖರ್ ಡಿ. ಬಾರಕೇರ ಮತ್ತು ಡಾ. ಶಿವಲೀಲಾ ಎಸ್. ಕುಕನೂರ್, ಸೇರಿದಂತೆ ಇತರ ವಿಜ್ಞಾನಿಗಳು ಮೌಲ್ಯಮಾಪನದ ತಾಕುಗಳಿಗೆ ಭೇಟಿನೀಡಿ ವಿವಿಧದೇಶೀತಳಿಗಳ ಬೆಳವಣಿಗೆಯನ್ನುಪರಿಶೀಲಿಸಿದರು.
ತೀವ್ರಬರಪರಿಸ್ಥಿತಿಯನಡುವೆಯೂದೇಶೀನವಣೆಮತ್ತುಸಾಮೆತಳಿಗಳುತೋರಿಸುತ್ತಿರುವಉತ್ತಮಬೆಳೆಸಾರ್ಥ್ಯಪಕ್ಕೆತಂಡವುಮೆಚ್ಚುಗೆವ್ಯಕ್ತಪಡಿಸಿತು.ಸ್ಥಳೀಯಪರಿಸರಕ್ಕೆಹೊಂದಿಕೊಂಡುಪ್ರತಿಕೂಲಪರಿಸ್ಥಿತಿಯಲ್ಲಿಯೂಉತ್ತಮವಾಗಿಬೆಳೆಯುತ್ತಿರುವತಳಿಗಳಲ್ಲಿರುವಕೃಷಿಗುಣಲಕ್ಷಣಗಳನ್ನುವೈಜ್ಞಾನಿಕವಾಗಿಗುರುತಿಸಿ, ಮುಂದಿನ ಹಂತದಲ್ಲಿ ಹೆಚ್ಚಿನ ಮೌಲ್ಯಮಾಪನಕೈಗೊಳ್ಳುವ ಅಗತ್ಯವನ್ನುತಂಡ ತಿಳಿಸಿತು.
ಮುಂದಿನ ದಿನಗಳಲ್ಲಿ ಸಂಶೋಧನೆ ಮತ್ತು ತಳಿ ಅಭಿವೃದ್ಧಿ ಕಾರ್ಯ್ಯಿಕ್ರಮಗಳಲ್ಲಿ ಅವುಗಳನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ. ಉತ್ತಮ ತಳಿಗಳನ್ನು ಗುರುತಿಸಿದ ನಂತರ ಗುಣಮಟ್ಟದ ಬೀಜಸಂರಕ್ಷಣೆ, ಬೀಜೋತ್ಪಾದನೆ ಹಾಗೂ ರೈತರಿಗೆ ಸುಲಭವಾಗಿ ಲಭ್ಯವಾಗುವಂತೆ ಬೀಜಪ್ರಸರಣ ವ್ಯವಸ್ಥೆ ರೂಪಿಸುವುದರಿಂದ ದೇಶೀತಳಿಗಳು ಸಂಶೋಧನಾ ತಾಕುಗಳಿಗಷ್ಟೇ ಉಳಿಯದೆ ನೇರವಾಗಿ ರೈತರ ಹೊಲಗಳಿಗೆ ತಲುಪುವಂತಾಗಲಿದೆ ಎಂಬುದು ನಮ್ಮ ಆಶಯವಾಗಿದೆ.


About The Author
Discover more from JANADHWANI NEWS
Subscribe to get the latest posts sent to your email.