June 18, 2026
IMG-20260618-WA0143

ನಾಯಕನಹಟ್ಟಿ-:
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಮಸ್ಜೀದ್ -ಎ- ಗೌಸಿಯಾ ಅರೀಪ್ ಅಲಿ ಷಾ- ಖಾದ್ರಿ ಆಸ್ಥಾನದಲ್ಲಿ ಮೊಹರಂ ಹಬ್ಬದ ಅಂಗವಾಗಿ ಧಾರ್ಮಿಕ ವಿಧಿವಿಧಾನಗಳಿಗೆ ಅಧಿಕೃತವಾಗಿ ಊರುಸ್ ಗೆ ಚಾಲನೆ ನೀಡಲಾಯಿತು.

ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಭಕ್ತರು ಭಾಗವಹಿಸಿ ಹಬ್ಬದ ಆಚರಣೆಗೆ ಶುಭಾರಂಭ ಮಾಡಿದರು.

ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ವಿವಿಧ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಧಾರ್ಮಿಕ ಮುಖಂಡರಾದ ಉಜ್ಜಿನಿ ಹಜರತ್ ಸೈಯದ್ ರೆಹಮತ್ತುಲ ಷಾ ಖಾದ್ರಿ ಸಜ್ಜಾದ್ ಮಾತನಾಡಿದ ಅವರು ಮೊಹರಂ ಹಬ್ಬದ ಮಹತ್ವವನ್ನು ವಿವರಿಸಿ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರಿದರು.

ಇದೇ ವೇಳೆ ರೇಖಲಗೆರೆ ಗ್ರಾಮದ ಧರ್ಮ ಗುರು ಹಬೀಬ್ ಗುರೂಜಿ ಮಾತನಾಡಿದರು.
ಹಬ್ಬದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳಿಗೆ ಸಿದ್ಧತೆಗಳು ಆರಂಭಗೊಂಡಿವೆ. ವಿವಿಧ ಸಮಿತಿಗಳ ಸದಸ್ಯರು ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಚಿತ್ರದುರ್ಗ ನೂರ್ ಆಲಿ ಷಾ, ದಾವಣಗೆರೆ ಖಾಜ ಸೈಯದ್ ಷಾ ಮಹಮ್ಮದ್ ಮುಜಾಹಿದ್ದೀನ್ ಸೆಹತವತದಿ ಚಿಪಿವುಲ್ ಖಾದ್ರಿ, ರೇಖಲಗೆರೆ ಜಾಫರ್ ಮೌನ ಗೌಸಿಯಾ ಮಜೀದ್,ಹಾಗೂ ರೇಖಲಗೆರೆ ಅರೀಪ್ ಅಲಿ ಷಾ ಖಾದ್ರಿ ಆಸ್ಥಾನ ಟ್ರಸ್ಟ್ ಅಧ್ಯಕ್ಷ ಯೂಖೂಬ್, ಉಪಾಧ್ಯಕ್ಷ ಗೌಸಪೀರ್ ಖಾನ್, ಕಾರ್ಯದರ್ಶಿ ಅಫ್ಜಲ್ ಖಾನ್, ಸದಸ್ಯರಾದ ನೂರುಲ್ಲಾ, ಯೋಸೂಪ್, ಮನ್ಸೂರ್ ಖಾನ್, ಅಜಮ್, ಇರ್ಫಾನ್, ಸಿದ್ದಿಕ್, ಹೈದರಾಲಿ, ಗ್ರಾಮಸ್ಥರಾದ ಇಬ್ರಾಹಿಂ ಖಾನ್, ಯಾಸಿನ್ ಖಾನ್, ಮನ್ಸೂರ್ ಸಾಬ್ ಆಲಿ ಸೇರಿದಂತೆ ಯುವಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೊಹರಂ ಆಚರಣೆಗೆ ಅಧಿಕೃತ ಚಾಲನೆ ನೀಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading