ನಾಯಕನಹಟ್ಟಿ : ಹೋಬಳಿಯ ಗುಂತಕೋಲಮ್ಮನಹಳ್ಳಿ ಕಾವಲು ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸೇವಾ ಸಮಿತಿ ರಚಿಸಲಾಯಿತು.
ದಿವ್ಯ ಸಾನಿಧ್ಯ : ರಾಜಯೋಗ ವಿದ್ಯಾಶ್ರಮ ಶ್ರೀ ದೇನಾ ಭಗತ್ ಗುರೂಜಿ ರೇಖಲಗೆರೆ ಕಾವಲು.
ನಂತರ ಶ್ರೀ ಆಂಜನೇಯ ಸೇವಾ ಸಮಿತಿ ಕಾರ್ಯದರ್ಶಿ ಕೆ ಎಚ್ ಪಿತಾಂಬರ ಮಾತನಾಡಿ 2026 ನೇ ಸಾಲಿನ ಶ್ರಾವಣ ಮಾಸದಲ್ಲಿ ನಾಲ್ಕು ಶನಿವಾರಗಳು ಬಂದಿದ್ದು, ಮೊದಲನೇ ಶನಿವಾರ ಆಗಸ್ಟ್ 15 ರಂದು, ಎರಡನೇ ಶನಿವಾರ ಆಗಸ್ಟ್ 22ರಂದು, ಮೂರನೇ ಶನಿವಾರ ಆಗಸ್ಟ್ 29ರಂದು, ನಾಲ್ಕನೇ ಶನಿವಾರ ಸೆಪ್ಟಂಬರ್ 5ರಂದು ಬಂದಿವೆ. ಈ ನಾಲ್ಕು ವಾರಗಳಲ್ಲಿ ಶ್ರೀ ಆಂಜನೇಯ ಸ್ವಾಮಿಯನ್ನು ಭಕ್ತಿ ಭಾವದಿಂದ ಪೂಜಿಸಬೇಕೆಂದು ಸೇವಾ ಸಮಿತಿ ರಚಿಸಲು ಈ ದಿನ ಸಭೆ ಸೇರಿ ತೀರ್ಮಾನಿಸಿದ್ದೇವೆ. ಈ ವರ್ಷದ ಸೇವಾ ಸಮಿತಿಯ ದಿವ್ಯ ಸಾನಿಧ್ಯವನ್ನು ಶ್ರೀ ದೇನಾ ಭಗತ್ ಗುರೂಜಿ ವಹಿಸಲಿದ್ದಾರೆ ಎಂದು ಹೇಳಿದರು.
ಈ ಸೇವಾ ಸಮಿತಿಯಲ್ಲಿ ಗೌರವಧ್ಯಕ್ಷರಾಗಿ ಕೆ.ಜಿ ಮಂಜಣ್ಣ, ಅಧ್ಯಕ್ಷರಾಗಿ ಪ್ರೊ.ಕೆ ಸಿ ತಿಪ್ಪೇಸ್ವಾಮಿ, ಕಾರ್ಯದರ್ಶಿಯಾಗಿ ಕೆ ಎಚ್ ಪಿತಾಂಬರ, ಖಜಾಂಚಿಯಾಗಿ ಜೆಸಿಬಿ ಎನ್ ತಿಪ್ಪೇಸ್ವಾಮಿ ಸೇರಿದಂತೆ 30 ರಿಂದ 35 ಜನ ಸದಸ್ಯರ ಸೇವಾ ಸಮಿತಿ ರಚಿಸಲಾಗಿದೆ. ಎಲ್ಲ ಸದಸ್ಯರು ಸೇರಿ ನಾಲ್ಕು ವಾರಗಳ ಕಾಲ ಈ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಲಿದ್ದೇವೆ. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಶ್ರಾವಣ ಮಾಸದ ನಾಲ್ಕು ಶನಿವಾರದಂದು ಪ್ರತಿವಾರ ಒಬ್ಬೊಬ್ಬರು ಅನ್ನ ಸಂಪರ್ಕ ವ್ಯವಸ್ಥೆ ಕಲ್ಪಿಸಲಿದ್ದಾರೆ. ಆದ್ದರಿಂದ ತೊರೆಕೋಲಮ್ಮನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ಸಿ ಗೊಳಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಾಜಯೋಗ ವಿದ್ಯಾಶ್ರಮದ ದೇನಾ ಭಗತ್ ಗುರೂಜಿ, ಗೌರವಾಧ್ಯಕ್ಷ ಕೆ ಜಿ ಮಂಜಣ್ಣ, ಅಧ್ಯಕ್ಷ ಪ್ರೊ. ಕೆ ಸಿ ತಿಪ್ಪೇಸ್ವಾಮಿ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ರೇಖಲಗೆರೆ ಚೆನ್ನಯ್ಯ, ಉಪಾಧ್ಯಕ್ಷರಾದ ಎ ಟಿ ಅಶೋಕ್, ಬಿ ಓ ಆರ್ ಓಬಣ್ಣ, ನಿರ್ದೇಶಕರಾದ ಎಸ್ ತಿಪ್ಪಯ್ಯ, ಎನ್ ಬೋರೇಶ, ಆರ್ ಜಯಣ್ಣ, ಜಿ ಎಂ ತಿಪ್ಪೇಸ್ವಾಮಿ, ಗುಂಡಯ್ಯ, ಸಿದ್ದಲಿಂಗಪ್ಪ, ಕೆ ಎಲ್ ರಾಮದಾಸ್ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.