ಹಿರಿಯೂರು :
ವಾಣಿ ಸಕ್ಕರೆ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯರವರು ಬೋಧನೆಯಲ್ಲಿ ಕ್ರಿಯಾಶೀಲವಾಗಿರುವ ಜೊತೆಗೆ ಎನ್.ಎಸ್.ಎಸ್. ಎನ್.ಸಿ.ಸಿ., ಸಾಂಸ್ಕೃತಿಕ ಸಮಿತಿಯಂತ ವಿವಿಧ ಬಗೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜನಮನ್ನಣೆ ಗಳಿಸಿದ್ದು, ದಕ್ಷತೆ, ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆಗೆ ಹೆಸರಾಗಿದ್ದಾರೆ ಎಂಬುದಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ನಿವೃತ್ತ ಜಿಲ್ಲಾಧಿಕಾರಿಗಳಾದ ಕೆ.ಅಮರನಾರಾಯಣ ಹೇಳಿದರು.
ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ “ಟಿ.ಪಿ.ಕೈಲಾಸಂ ಸಭಾಂಗಣ”ದಲ್ಲಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯರವರಿಗೆ ಹಮ್ಮಿಕೊಳ್ಳಲಾಗಿದ್ದ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು,
ನಾನು ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿದ್ದಾಗ ದುರ್ಗದ 19 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ, ಲಕ್ಷಾಂತರ ಗಿಡಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಟ್ಟಿದ್ದೇವೆ, ಚಿತ್ರದುರ್ಗ ಧೂಳು ನಗರ ಎಂದಿದ್ದ ಜನರಿಗೆ ಸ್ವಚ್ಛ ನಗರ ಮಾಡಲು ಪರಿಸರ ಪಯಣ ಪರಿಸರ ದಿನಾಚರಣೆ ಕಾರ್ಯಕ್ರಮಗಳನ್ನು ಸಂಘಟಿಸಿ, ಕಡೆಹೊಡೆವು ಗ್ರಾಮದಲ್ಲಿ ಆಂಜನೇಯಸ್ವಾಮಿ ದೇವಸ್ಥಾನದ ಸ್ವಚ್ಛತೆ, ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದ ನೊಳಂಬರ ಕಾಲದ ಆಂಜನೇಯಸ್ವಾಮಿ ದೇವಸ್ಥಾನದ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸ್ವಚ್ಛತಾ ಆಂದೋಲನ ಮಾಡಿದ್ದೇನೆ,
ವಾಣಿ ಸಕ್ಕರೆ ಪ್ರಥಮದರ್ಜೆ ಕಾಲೇಜಿನ ಬಯಲು ಆವರಣದಲ್ಲಿ ಹೊಂಗೆಮರಗಳು, ಶ್ರೀಗಂಧ ಸೇರಿದಂತೆ ವಿವಿಧ ರೀತಿಯ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ಪರಿಸರ ನಿರ್ಮಿಸಲಾಗಿದೆ, ಐಮಂಗಳ ಹೋಬಳಿಯ ಅರಳಿಕಟ್ಟಿ ಗ್ರಾಮದ ರಂಗಸ್ವಾಮಿ ಎಂಬುವರ ಐದು ಎಕರೆ ಜಮೀನಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಗಿಡಗಳನ್ನು ನೆಡಿಸಲಾಯಿತು, ಇಂದು ಆ ಮರಗಳು ಹೆಮ್ಮರವಾಗಿ ಬೆಳೆದಿವೆ ಹೀಗೆ ಇಂತಹ ನೂರಾರು ಕಾರ್ಯಕ್ರಮಗಳಿಗೆ ಧರಣೇಂದ್ರಯ್ಯನವರು ಸಹಕಾರ ನೀಡುವ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಚಿದಾನಂದಗೌಡ ಮಾತನಾಡಿ, ಸಾಹಿತ್ಯ ಕಲೆ ಓದುವ ಪದವೀಧರರು ಕಡಿಮೆಯಾಗಿದ್ದಾರೆ, ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಪರಿಣಾಮವಾಗಿ ಬೇರೆ ಬೇರೆ ಕೋರ್ಸ್ ಗಳನ್ನು ಓದಲು ಯುವಕ ಮತ್ತು ಯುವತಿಯರು ಮುಂದಾಗುತ್ತಿದ್ದಾರೆ ಆದಕಾರಣ ಉದ್ಯೋಗ ಮುಖಿಯಾಗಿರುವ ಕೋರ್ಸು ಗಳನ್ನು ಇಂತಹ ಪದವಿ ಕಾಲೇಜುಗಳಲ್ಲಿ ಸರ್ಕಾರ ಆರಂಭಿಸುವ ಕೆಲಸ ಮಾಡಬೇಕು ಎಂಬುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ಎಸ್.ರಘುನಾಥ್ ಮಾತನಾಡಿ, ಡಾ.ಡಿ.ಧರಣೇಂದ್ರಯ್ಯನವರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ವ್ಯಕ್ತಿಯಾಗಿದ್ದು, ಹರಿಯಬ್ಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಒಂದು ಡಿಗ್ರಿ ಕಾಲೇಜು ಆರಂಭವಾಗಬೇಕೆಂದು ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ರವರಲ್ಲಿ ಮನವಿ ಸಲ್ಲಿಸಿದ್ದೆವು,
ಆ ಸಂದರ್ಭದಲ್ಲಿ, ದಾವಣಗೆರೆ ವಿಶ್ವವಿದ್ಯಾಲಯದ ಸೆನೆಟ್ ಮಂಡಳಿ ಸದಸ್ಯರಾಗಿದ್ದ ಡಾ.ಧರಣೇಂದ್ರಯ್ಯರವರು ಹರಿಯಬ್ಬೆಯಲ್ಲಿ ಕಾಲೇಜು ಪ್ರಾರಂಭ ಮಾಡಲು ಸಹಕರಿಸುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಡಿಗ್ರಿ ಕಾಲೇಜು ಪ್ರಾರಂಭವಾಗಲು ನೆರವಾದರು, ಇವರ ನಿವೃತ್ತಿಯ ಜೀವನ ಸುಖಮಯವಾಗಿರಲಿ, ಭಗವಂತ ಇವರಿಗೆ ಸಕಲ ಸಂಪತ್ತು ದಯಪಾಲಿಸಲಿ ಎಂಬುದಾಗಿ ಹೇಳಿದರು.
ಕುವೆಂಪು ವಿವಿಯ ನಿವೃತ್ತ ಪರೀಕ್ಷಾಂಗ ಕುಲಸಚಿ ಎ.ರಾಮೇಗೌಡರವರು ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬರೂ ರಾಜಕಾರಣಿಗಳನ್ನು ಮಾದರಿಯಾಗಿ ಮಾಡಿಕೊಳ್ಳಬೇಕು, ರಾಜಕೀಯ ನಾಯಕರು ಯಾವುದೇ ಕಾರಣಕ್ಕೂ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ತಮ್ಮ 90 ನೇ ವಯಸ್ಸಿನಲ್ಲಿಯೂ ರಾಜಕೀಯ ನಾಯಕರಾಗಿ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ, ಇವರ ಈ ಕ್ರೀಯಾಶೀಲತೆ ಸಮಾಜದ ಪ್ರತಿಯೊಬ್ಬರಲ್ಲೂ ಬರಬೇಕು ಎಂದರಲ್ಲದೆ,
ಈ ನಿಟ್ಟಿನಲ್ಲಿ ಡಾ.ಡಿ.ಧರಣೇಂದ್ರಯ್ಯರವರು ಸಹ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರ ಮನೆಯಲ್ಲಿಯೇ ಉಳಿಯದೇ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಲಿ, ಅಥವಾ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಡಾ.ಡಿ.ಧರಣೇಂದ್ರಯ್ಯರವರ ನಿವೃತ್ತಿಯ ಜೀವನ ಸುಖ-ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂಬುದಾಗಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣಪ್ರಾಂತೀಯ ಆರ್.ಎಸ್.ಎಸ್.ಸಂಚಾಲಕರಾದ ನಾ.ತಿಪ್ಪೇಸ್ವಾಮಿ, ಜಿಲ್ಲಾ ಜೆ,ಡಿ,ಎಸ್, ಘಟಕದ ಮಾಜಿ ಅಧ್ಯಕ್ಷರಾದ ಡಿ, ಯಶೋಧರ, ಕುವೆಂಪು ವಿವಿಯ ನಿವೃತ್ತ ಪರೀಕ್ಷಾಂಗ ಕುಲಸಚಿ ಎ ,ರಾಮೇಗೌಡ, ಕೆ, ಎಂ, ಸುರೇಶ್, ನಿವೃತ್ತ ಜಂಟಿ ನಿರ್ದೇಶಕರಾದಟಿ,ವಿ, ಸುರೇಶ್ ಗುಪ್ತ, ಶ್ರೀಮತಿ ಪರಿಮಳ ಅಮರನಾರಾಯಣ, ನಿವೃತ್ತಪ್ರಾಂಶುಪಾಲ ಡಾ,ಸಿ,ಶಿವಲಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಬಿ,ಎಸ್ ರಘುನಾಥ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ತಿಪ್ಪೇಸ್ವಾಮಿ, ಡಾ, ಸಿದ್ದಲಿಂಗಯ್ಯ, ಬಿ,ಆರ್, ಹೇಮಲತಾ, ದೇವಿಕ, ಡಾ,ವಲಿ, ಡಾ, ಗಂಗಾಧರ, ಬಸವರಾಜ್ ಟಿ, ಬೆಳಗಟ್ಟ,ಸಾದತ್ ಭರತ್,,ಎಚ್,ಎಸ್ ಮಹಾಂತೇಶ್, ಎಸ್, ಹೆಚ್, ಸುಂದರ್ ರಾಜ್ ಎಲ್,ಆನಂದ ಶೆಟ್ಟಿ, ಜೋಗಪ್ಪ ಬಿ,ಕೆ ನಾಗಣ್ಣ, ಕಸವನಹಳ್ಳಿ ರಮೇಶ್, ಹಾಸ್ಯ ಜಗನ್ನಾಥ್, ಲೋಕೇಶ್, ಡಿ ,ನಾಗರಾಜು ಸಿದ್ದಲಿಂಗಯ್ಯ ಧರಣೇಂದ್ರಯ್ಯನವರ ಪತ್ನಿ ಕವಿತಾ, ಡಾ, ಬೈರಸಿದ್ದಪ್ಪ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಅನುವಾದಕ ಪ್ರೊ,ಎಂ,ಜಿ,ರಂಗಸ್ವಾಮಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ,ಎಲ್, ಗಿರಿಧರ, ಯುವ ಪ್ರಶಸ್ತಿ ಪುರಸ್ಕೃತ ಎಸ್, ಜಿ ,ರಂಗಸ್ವಾಮಿಸಕ್ಕರ, ಚಿತ್ರದುರ್ಗ ಆಕಾಶವಾಣಿ ಕೇಂದ್ರದ ನಿರೂಪಕರಾದ ಡಾ,ನವೀನ್ ಮಸ್ಕಲ್, ಡಾ,ಎಸ್.ಮಾರುತಿ, ಪತ್ರಕರ್ತರಾದ ಎಂ,ರವೀಂದ್ರನಾಥ್, ಉಮೇಶ್ ಯಾದವ್, ಪುಷ್ಪಲತ, ಸಿ.ರಂಗಸ್ವಾಮಿ, ಚಿತ್ತಯ್ಯ, ವಿ,ನಾಗರಾಜ್, ಆರ್.ತಿಪ್ಪೇಶ, ಬಿ,ಕೆ.ನಾಗರಾಜು,ರೇವಣ್ಣ, ಹಾಗೂ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.




About The Author
Discover more from JANADHWANI NEWS
Subscribe to get the latest posts sent to your email.