ನಾಯಕನಹಟ್ಟಿ, ಆಗಸ್ಟ್ 2: ಸಮಾಜ ಸೇವಕ ಮಾಲೂರು ಶಿವಕುಮಾರ್ ಎಂ. ನಾಯಕ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿ, ಆಟೋ ಚಾಲಕರಿಗೆ ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮೆರುಗು ತಂದರು.
ಪಟ್ಟಣದ ಹೊರವಲಯದಲ್ಲಿರುವ ಮಸಾಲ ಮ್ಯಾಜಿಕ್ ಡಾಬಾ ಸಮೀಪ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಲೂರು ಶಿವಕುಮಾರ್ ಎಂ. ನಾಯಕ ಕೇಕ್ ಕತ್ತರಿಸಿ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿದರು. ಬಳಿಕ ಆಟೋ ಚಾಲಕರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ, ಅವರ ಸೇವೆಯನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೂರು ಶಿವಕುಮಾರ್ ಎಂ. ನಾಯಕ, “ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಮಾಜ ಸೇವೆಯೇ ನನ್ನ ಪ್ರಮುಖ ಗುರಿ. ಮಳೆ, ಬಿಸಿಲು, ಗಾಳಿ ಎನ್ನದೆ ಹಗಲಿರುಳು ಶ್ರಮಿಸುವ ಆಟೋ ಚಾಲಕರ ಸೇವೆ ಅತ್ಯಂತ ಶ್ಲಾಘನೀಯ. ಅವರ ಸಂಕಷ್ಟಗಳಿಗೆ ಸದಾ ಸ್ಪಂದಿಸಿ, ಅವರ ಬೆನ್ನೆಲುಬಾಗಿ ನಿಲ್ಲುವ ಪ್ರಯತ್ನ ಮಾಡುತ್ತೇನೆ. ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳಿಗೆ ನಾನು ಚಿರಋಣಿ. ಸಮಾಜ ಸೇವೆಯ ಮೂಲಕ ಅವರ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡ ಅಶೋಕ್, ಶ್ರೀ ತಿಪ್ಪೇರುದ್ರಸ್ವಾಮಿ ಆಟೋ ಮತ್ತು ಮಾಲೀಕರ ಸಂಘದ ತಿರುಮಲೇಶ್, ಕಾಜಪೀರ್, ಮಹಾಂತೇಶ್, ಜಾಕಿರ್, ರವಿ, ಮಾಬಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಆಟೋ ಚಾಲಕರು, ಸಂಘದ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.