August 3, 2026
IMG-20260803-WA0186

ನಾಯಕನಹಟ್ಟಿ- ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ವರದಾನವಾಗಿದೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್.ಸುರೇಶ್ ಹೇಳಿದರು.

ಸೋಮವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶಿಕ್ಷಣಕ್ಕೆ ಗ್ರಾಮಸ್ಥರು ಪ್ರೋತ್ಸಾಹ ನೀಡಬೇಕು ಪ್ರತಿಯೊಬ್ಬರು ಶಿಕ್ಷಣ ಇಲಾಖೆ ಜೊತೆ ಕೈಜೋಡಿಸಿ ಮಕ್ಕಳ ವಿದ್ಯಾಭ್ಯಾಸ ಸರ್ವಗಣಿ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹ ಬಹಳ ಮುಖ್ಯ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷೆ. ಶ್ರೀಮತಿ ಟಿ. ಮಂಜುಳಾ ಶ್ರೀಕಾಂತ್ ಮಾತನಾಡಿ ಕಂಪ್ಯೂಟರ್ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿರುವುದು ತುಂಬಾ ಉತ್ತಮವಾದ ಕೆಲಸ ವಿದ್ಯಾರ್ಥಿಗಳಿಗೆ ಪೋಷಕರು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರ ಭವಿಷ್ಯ ರೂಪಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ತಾಲೂಕು ಸಮನ್ವಯ ಅಧಿಕಾರಿ ಮಂಜು ಬಾಬು ಮಾತನಾಡಿದರು. ಮಾದಯ್ಯನ ಹಟ್ಟಿ ಗ್ರಾಮಸ್ಥರು ಇಡೀ ರಾಜ್ಯಕ್ಕೆ ಮಾದರಿ ಗ್ರಾಮಸ್ಥರ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಆರಂಭಿಸಿ ಶಿಕ್ಷಣ ಇಲಾಖೆಯ ಜೊತೆಗೆ ಕೈಜೋಡಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಾಂದಿ ಹಾಡಿದ್ದಾರೆ ಎಂದು ಗ್ರಾಮಸ್ಥರಿಗೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ ವೀರಭದ್ರಪ್ಪ, ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ, ಬಸಣ್ಣ, ಪಟ್ಟಣ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಜಿ. ಪಾಂಡುರಂಗಪ್ಪ, ಇಸಿಓ ತಿಪ್ಪೇಸ್ವಾಮಿ ,ಸಿಆರ್ಪಿ ಸಿ.ಹನುಮಂತಪ್ಪ, ಜಿ ಪಾಲಯ್ಯ, ಸರ್ಕಾರಿ ಮಾದರಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಚಂದನ,
ಎಸ್ ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಪೂಜಾರಿ ತಿಪ್ಪಣ್ಣ, ಅಂಗಡಿ ನಾಗರಾಜ್, ಯರ್ರಯ್ಯ, ದೊಡ್ಡ ಪಾಲಯ್ಯ, ಗೂನೂರು ಬೊಮ್ಮಯ್ಯ, ಎ.ಟಿ .ತಿಪ್ಪೇಸ್ವಾಮಿ, ಕರವೇ ಬಿ ತಿಪ್ಪೇಸ್ವಾಮಿ, ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಬಂಗಿ ಬಸಣ್ಣ ಸಹ ಶಿಕ್ಷಕ ಹಾಲೇಶ್ ಕೆ ಜಿ, ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading