ಪಾವಗಡ: ಭಾರತೀಯ ಸಂಜಾತರಾದ ಡಾ. ಶಿವಕುಮಾರ್ ಬಸವನಹಳ್ಳಿ ಅವರು ಅಮೆರಿಕಾದಲ್ಲಿ ಕಳೆದ ಎರಡು ದಶಕಗಳಿಂದ ಭಾರತೀಯ ಸಂಸ್ಕೃತಿ ಹಾಗೂ ವಿಚಾರಧಾರೆಗಳನ್ನು ಅಲ್ಲಿನ ಜನರಿಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಸ್ಥಾಪಿಸಿರುವ Global Yuva ಸಂಸ್ಥೆಯ ಮೂಲಕ ವಿಶೇಷವಾಗಿ ಯುವಜನರಿಗೆ ಭಾರತೀಯ ಚಿಂತನೆಗಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಪರಿಚಯಿಸಲಾಗುತ್ತಿದೆ.
ಡಾ. ಶಿವಕುಮಾರ್ ಬಸವನಹಳ್ಳಿ ಹಾಗೂ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ನಡುವೆ ಹಲವು ವರ್ಷಗಳಿಂದ ಆತ್ಮೀಯ ಸಂಪರ್ಕವಿದ್ದು, ಅನೇಕ ಯೋಜನೆಗಳಲ್ಲಿ ಸಹಭಾಗಿತ್ವವೂ ಇದೆ.
ಇದೇ ಹಿನ್ನೆಲೆಯಲ್ಲಿಾ ದಿನಾಂಕ 23-05-2026ರ ಶನಿವಾರ ಸಂಜೆ 5 ಗಂಟೆಗೆ Global Yuva ವತಿಯಿಂದ ವಿಶೇಷ ಆನ್‌ಲೈನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು “Swami Vivekananda’s Vision on Education” ವಿಷಯದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮವು ಅಮೆರಿಕ, ಕೆನಡಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ನೇರಪ್ರಸಾರವಾಗಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ.
ಆಸಕ್ತರು ಕೆಳಗಿನ ಜೂಮ್ ಲಿಂಕ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು:
Join Zoom Meeting:
�
us02web.zoom.us
Meeting ID: 798 246 8174
— ಆಡಳಿತ ಮಂಡಳಿ
ಶ್ರೀ ರಾಮಕೃಷ್ಣ ಸೇವಾಶ್ರಮ
About The Author
Discover more from JANADHWANI NEWS
Subscribe to get the latest posts sent to your email.