ನಾಯಕನಹಟ್ಟಿ-: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಜೂನ್ 6 ರಿಂದ 13 ರವರೆಗೆ ಪಟ್ಟಣದ ಸಮೀಪವಿರುವ ಏಕಾಂತೇಶ್ವರ ಮಠದಲ್ಲಿ ಮಧ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಯೋಜನಾ ಅಧಿಕಾರಿ ಜಯಂತ್ ಕುಮಾರ್ ತಿಳಿಸಿದರು.

ಗುರುವಾರ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಧ್ಯವರ್ಜನೆ ಶಿಬಿರದ ಎರಡನೇ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಪೀಳಿಗೆ ವ್ಯಸನಗಳಿಂದ ಮುಕ್ತಗೊಳಿಸಬೇಕೆಂಬುದೇ ಇದರ ಉದ್ದೇಶದಿಂದ ಮಧ್ಯವರ್ಜನ ಶಿಬಿರವನ್ನು ಆಯೋಜಿಸಲಾಗಿದ್ದು,ನಾಯಕನಹಟ್ಟಿ ಹೋಬಳಿಯ ಪ್ರತಿ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಧ್ಯೆ ಸನಿಗಳನ್ನು ಕರೆತಂದು ಮಧ್ಯವರ್ಜನ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದರು.
ಇದೆ ವೇಳೆ ಕಾರ್ಯಕ್ರಮ ಆಯೋಜನೆ ಕುರಿತು ಮುಖಂಡರುಗಳೊಂದಿಗೆ ಸುಧೀರ್ಘವಾಗಿ ಚರ್ಚಿಸಿ, ಕಾರ್ಯಕ್ರಮ ಆಯೋಜನೆಯ ದಿನಾಂಕವನ್ನು ನಿಗದಿಪಡಿಸಲಾಯಿತು.
ಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರದ ಅಧ್ಯಕ್ಷ ಪಿ ಲೋಕೇಶ್ ಆಚಾರ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಮಧ್ಯ ವರ್ಜನೆ ಶಿಬಿರದ ಅಧ್ಯಕ್ಷರಾದ ಪಿ. ಲೋಕೇಶ್ ಆಚಾರಿ ,ಪಟ್ಟಣ ಪಂಚಾಯತಿ ಸದಸ್ಯ ಸರ್ವ ಮಂಗಳ ಎಸ್ ಉಮಾಪತಿ, ಪ.ಪಂ. ಮಾಜಿ ಸದಸ್ಯ ಬಸಪ್ಪ ನಾಯಕ, ಕಾಳಪ್ಪ,ಕರ್ನಾಟಕ ಮದಕರಿ ವಾಲ್ಮೀಕಿ ಸೇನೆ ರಾಜ್ಯ ಅಧ್ಯಕ್ಷ ಬಿ.ತಿಪ್ಪಕ್ಕ ಚಿನ್ನಮಲ್ಲಯ್ಯ, ಕರವೇ ಕನ್ನಡ ಸೇನೆ. ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಹೋಬಳಿ ಘಟಕ ಅಧ್ಯಕ್ಷ ಕೆ.ಜಿ. ಮಂಜುನಾಥ್, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಬಂಗಾರಪ್ಪ, ಮುತ್ತಯ್ಯ, ಪ್ರಹ್ಲಾದ, ಶಿವಕುಮಾರ್ ಭಂಡಾರಿ, ಶರಣಪ್ಪ, ನಾಯಕನಹಟ್ಟಿ ಮಲೆಯ ಮೇಲ್ವಿಚಾರಕಿ ಶ್ರೀಮತಿ ಆರ್. ಎನ್.ಶಶಿಕಲಾ, ಮನುಮೈನಹಟ್ಟಿ ವಲಯ ಮೇಲ್ವಿಚಾರಕ ಪ್ರದೀಪ್ ಕುಮಾರ್, ಸೇವಾ ಪ್ರತಿನಿಧಿಗಳಾದ ಪಿ.ಬಿ. ಅಶ್ವಿನಿ, ಟಿ ನಾಗರತ್ನ,ಡಿ. ಎಸ್. ಮಹಾಂತಮ್ಮ, ಕೆ. ನೇತ್ರಮ್ಮ, ನಾಗರತ್ನ, ಹೇಮಲತಾ, ಶಶಿಕಲಾ, ಶೋಭಾ, ಜಿ ಲಕ್ಷ್ಮೀ, ಕೆ. ಜ್ಯೋತಿ, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.