ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಸುಧಾಕರ್ ರವರು ಮೇ 11 ರಂದು ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದು, ಸಚಿವ ಡಿ.ಸುಧಾಕರ್ ರವರು ಜನಮೆಚ್ಚಿದ ನಾಯಕರಾಗಿ ಜನಸೇವೆ ಮಾಡಿ,ತಾಲ್ಲೂಕಿನ ಜನರ ಪ್ರೀತಿ-ವಿಶ್ವಾಸ ಗಳಿಸಿರುವುದಕ್ಕೆ, ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲವೇ ಕಾರಣವಾಗಿದೆ, ನಮ್ಮ ತಂದೆಗೆ ಬೆಂಬಲವಾಗಿ ನಿಂತು ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೂ ಸಚಿವ ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ಧನ್ಯವಾದಗಳನ್ನು ಹೇಳಿದರು.
ನಗರದ ಸಚಿವರಾದ ಡಿ.ಸುಧಾಕರ್ ರವರ ಕಚೇರಿಯಲ್ಲಿ ಸಚಿವರಾದ ಡಿ.ಸುಧಾಕರ್ ರವರ ಜೊತೆಗೆ ನಿಂತು ಬೆಂಬಲಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಸಚಿವ ಸುಧಾಕರ್ ರವರ ಪುತ್ರ ಸುಹಾಸ್ ಸುಧಾಕರ್ ರವರ ನೇತೃತ್ವದಲ್ಲಿ ಕರೆಯಲಾಗಿದ್ದ ಸೌಹಾರ್ದಯುತ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಈ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿ.ಪಂ.ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಕೃಷಿಕ ಸಮಾಜದ ಅಧ್ಯಕ್ಷರಾದ ಚಿಗಳಿಕಟ್ಟೆ ಕಾಂತರಾಜ್, ಕಾಂಗ್ರೆಸ್ ಮುಖಂಡರುಗಳಾದ ಈರಲಿಂಗೇಗೌಡ, ಕಲ್ಲಟ್ಟಿತಿಪ್ಪೇಸ್ವಾಮಿ, ಕಲ್ಲಟ್ಟಿಹರೀಶ್, ಈ.ಮಂಜುನಾಥ್, ಪರಸೇಗೌಡರು, ಚಂದ್ರಪ್ಪ ಎಂ.ಡಿ.ಕೋಟೆ, ಬಿ.ಎನ್.ಪ್ರಕಾಸ್, ಸುರೇಶ್ ಬಾಬು, ಗಿಡ್ಡೋಬನಹಳ್ಳಿ ಅಶೋಕ್, ಪಿ.ಎಸ್.ಪಾತಯ್ಯ, ಜಿ.ಎಲ್.ಮೂರ್ತಿ, ಸೂರಗನಹಳ್ಳಿ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಗುಂಡೇಶ್ ಕುಮಾರ್, ಗೀತಾನಾಗಕುಮಾರ್, ಮಾನಸಮಂಜುನಾಥ್, ಅಂಬಿಕಾಆರಾಧ್ಯ, ರಮ್ಯಾಗೌಡ, ಮಮತಾ, ಜಗದೀಶ್, ಕೆ.ಡಿಪಿ ತಿಮ್ಮಣ್ಣ , ಹರ್ತಿಕೋಟೆ ಮಹಂತೇಶ್, ತಾಳವಟ್ಟಿ ಪ್ರವೀಣ್, ಮಸ್ಕಲ್ ಶ್ರೀನಿವಾಸ್, ಆಲದಮಟ್ಟಿ ರಂಗಯ್ಯ, ಡಿ.ಸುಧಾಕರ್ ಅಣ್ಣಂದಿರಾದ ಡಿ.ಎಸ್.ಕುಮಾರ್, ಸುರೇಶ್, ಅಳಿಯ ನಿತೇಶ್, ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.