•
ನಾಯಕನಹಟ್ಟಿ-:
ಇಂದಿನ ಆಧುನಿಕ ಯುಗದಲ್ಲಿ ಪೋಷಕರು ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಬೇಕು. ಅದರ ಬದಲಾಗಿ ಪುಸ್ತಕ ಓದುವ ಸದಭಿರುಚಿಯನ್ನು ಬಾಲ್ಯದಿಂದಲೇ ಬೆಳೆಸ ಬೇಕು ಎಂದು ಗೌಡಗೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ. ರಂಗಪ್ಪ
ಹೇಳಿದರು.
ಸೋಮವಾರ ಸಮೀಪದ ಗೌಡಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಅಕ್ಷರಾಭ್ಯಾಸ ಹಾಗೂ ಸರಸ್ವತಿ ಪೂಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಲಾಲನೆ- ಪಾಲನೆ ಹಾಗೂ ಉತ್ತಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬಾಲ್ಯದಲ್ಲೇ ಅಕ್ಷರಾಭ್ಯಾಸ ಮಾಡಿಸುವುದರಿಂದ ಮಕ್ಕಳಲ್ಲಿ ಕಲಿಕೆಯ ಕಡೆಗೆ ತಾನಾಗಿಯೇ ಆಸಕ್ತಿ ಮೂಡುತ್ತದೆ. ಸಾಮಾನ್ಯವಾಗಿ ಸಾರ್ವಜನಿಕರು ಮಕ್ಕಳ ಅಕ್ಷರಾಭ್ಯಾಸಕ್ಕಾಗಿ ಶೃಂಗೇರಿ ಮುಂತಾದ ಪುಣ್ಯಕ್ಷೇತ್ರಗಳಿಗೆ ತೆರಳುತ್ತಾರೆ. ಆದರೆ, ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಶಾಲಾ ಸಭಾಂಗಣದಲ್ಲೇ ಶಾರದಾ ದೇವಿಯ ಭವ್ಯ ಭಾವಚಿತ್ರವನ್ನಿಟ್ಟು ಪೂಜಿಸಿ, ಅಕ್ಷರಾಭ್ಯಾಸ, ಸರಸ್ವತಿ ಪೂಜೆ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ‘ಓಂ” ಎಂಬ ಪ್ರಥಮ ಅಕ್ಷರವನ್ನು ಬರೆಸಿ, ಜ್ಞಾನಾರ್ಜನೆಗೆ ಮುನ್ನುಡಿ ಬರೆಯುವ ನಡೆ ಶ್ಲಾಘನೀಯ ಕಾರ್ಯ. ಈ ಸಂಪ್ರದಾಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.




ಶಾಲಾ ಆವರಣವನ್ನು ಬಣ್ಣಬಣ್ಣದ ಆಕರ್ಷಕ ರಂಗೋಲಿ ಹಾಗೂ ವೈವಿಧ್ಯಮಯ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು.
ಇದೇ ವೇಳೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಮಂಜಮ್ಮ ಮಾತನಾಡಿದರು ಅಕ್ಷರಾಭ್ಯಾಸದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಎಸ್ ಡಿ ಎಂ ಸಿ ಅಧ್ಯಕ್ಷ ಆರ್ ನಾಗರಾಜ್, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ತಿಪ್ಪೇಸ್ವಾಮಿ, ಗ್ರಾಮದ ಮುಖಂಡ ಮಂಜಣ್ಣ, ಬಂಗಾರಪ್ಪ, ಗುರುಸ್ವಾಮಿ, ನಾರಾಯಣಚಾರಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಗೀತಾ, ಸದಸ್ಯೆ ಶೃತಿ,
ಶಾಲೆಯ ಸಹ ಶಿಕ್ಷಕ ಈ. ನಾಗರಾಜ್, ಎಚ್. ಎ. ಸುನಿತಾ, ಎಚ್. ಹನುಮಂತಪ್ಪ, ಪ್ರೇಮಕ್ಕ,
ಶಿಕ್ಷಕಿಯರಾದ ಶಿಲ್ಪ, ಎ.ನಾಗವೇಣಿ, ಅಂಗನವಾಡಿ ಶಿಕ್ಷಕಿ ಅನುಸೂಯಮ್ಮ, ಸೇರಿದಂತೆ ಪೋಷಕರು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.