July 12, 2026
IMG-20260711-WA0173


ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಪಟ್ಟಣದ ಕನ್ನಡ ಭವನದಲ್ಲಿ ಜುಲೈ ೧೨ ರಂದು ಭಾನುವಾರ ಬೆಳಿಗ್ಗೆ ೧೧-೩೦ಕ್ಕೆ ಮುಕ್ತ ವೈಚಾರಿಕ ವೇದಿಕೆ ಉದ್ಘಾಟನೆಯಾಗುವ ಮೂಲಕ ಅಸ್ಥಿತ್ವಕ್ಕೆ ಬರಲಿದೆ ಎಂದು ವೇದಿಕೆಯ ರೂವಾರಿ ಕವಯಿತ್ರಿ-ಲೇಖಕಿ ಕುಮಾರಿ ಎಂ.ಆರ್.ನಳಿನ ತಿಳಿಸಿದ್ದಾರೆ
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಇದರ ಉದ್ದೇಶ ಸ್ಥಳೀಯ ಯುವ ಲೇಖಕಿಯರು ಮತ್ತು ಲೇಖಕರು ಮತ್ತು ಕಲಾವಿದರಿಗೆ ವೇದಿಕೆಗಳು ಸಿಗದೆ ಅವರಲ್ಲಿನ ಪ್ರತಿಭೆ ಹಾಗೇ ಉಳಿದು ಕಮರಿ ಹೋಗುತ್ತದೆ , ಅಂತಹ ಯುವ ಪ್ರತಿಭೆಗಳ ಅವರ ಸಾಹಿತ್ಯ, ಕಲೆಗಳನ್ನು ಮುಕ್ತ ವಾಗಿ ಅನಾವರಣ ಗೋಳಿಸುವ ಮತ್ತು ನಾಡಿನ ಸಂಸ್ಕೃತಿ ಮತ್ತು ಸಾಂಸ್ಕ್ರತಿಕ ಸಂಪತ್ತನ್ನು ಉಳಿಸಿ ಬೆಳೆಸುವ ಉದ್ದೇಶ ಈ ವೇದಿಕೆ ಅಸ್ಥಿತ್ವಕ್ಕೆ ತರಲು ಪ್ರಮುಖ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಕವಯಿತ್ರಿ-ಲೇಖಕಿ ಕುಮಾರಿ ಎಂ.ಆರ್.ನಳಿನ, ಹೈಕೋರ್ಟಿನ ವಿಶ್ರಾಂತ ನ್ಯಾಯಧೀಶರಾದ ಹೆಚ್. ಬಿಲ್ಲಪ್ಪ, ಹಿರಿಯ ಸಾಹಿತಿಗಳಾದ ಪಿ.ಎಲ್.ಲೋಕೇಶ್ವರ್ , ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಆರ್.ಶಾAತಪ್ಪ, ಹಿರಿಯ ಉಪಾಧ್ಯಕ್ಷ ನಾಗತಿಹಳ್ಳಿಮಂಜುನಾಥ್, ಹಿರಿಯ ಮುಖಂಡ ಗೋ.ತಿಪ್ಪೇಶ್, ಮಾಜಿ ಕ.ಸಾ.ಪ ಅಧ್ಯಕ್ಷ ಬಾ.ಮೈಲಾರಪ್ಪ, ಹೆಚ್.ಪಿ ಸುಮತಿಕುಮಾರ್ ಸೇರಿದಂತೆ ಲೇಖಕರು ,ಕಲಾವಿದರು ಆಗಮಿಸಲಿದ್ದು ಇದೇ ಕಾರ್ಯಕ್ರಮದಲ್ಲಿ ಶಿವಕುಮಾರ್ ಹೆಚ್,ಧನಂಜಯ್,ರಾ.ಸುತಿಮ್ಮಯ್ಯ,ಕಾಚಾಪುರ ರಂಗಪ್ಪ, ಎಸ್,ಪಿ ಚಂದ್ರಶೇಖರ್,ಲಕ್ಷö್ಮಣ್‌ನಾಯ್ಕ, ಮಂಜುಳಾಕ್ಷಿ ಹಾಗೂ ಕುಮಾರಿ ಎಂ.ಆರ್.ನಳಿನ ಎಂ.ವಿ ರುದ್ರಪ್ಪ ಇವರಿಂದ ಏಕಪಾತ್ರಾಭಿನಯ ಕಾರ್ಯಕ್ರಮ ಜರುಗಲಿದ್ದು ಪುಸ್ತಕ ಬಿಡುಗಡೆ ಮಾಡಿರುವ ಲೇಖಕರಾದ ಎಂ.ಆರ್.ರಮೇಶ್, ಧನಂಜಯಮೆAಗಸAದ್ರ, ನಾಗತಿಹಳ್ಳಿಮಂಜುನಾಥ್ (ಹೊನ್ನಾರ) ಸಂಕಲ್ಪ ಸದಾಶಿವ ಹಾಗೂ ಭಾಗ್ಯ ಗಿರೀಶ್ ಇವರುಗಳಿಗೆ ಮಹಿಳಾ ಸದಸ್ಯರುಗಳಿಂದ ಗೌರವ ಸಮರ್ಪಣೆ ನಡೆಯಲಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading