July 6, 2026
FB_IMG_1783346648052


ಬೆಂಗಳೂರು :
ಕನ್ನಡ ಸಾಹಿತ್ಯ ಲೋಕವನ್ನು ಅಭಿವೃದ್ಧಿಪಡಿಸುವಲ್ಲಿ ಪುರುಷರ ಜೊತೆಗೆ ಮಹಿಳೆಯರು ಸಹ ಕೈಜೋಡಿಸಿದ್ದು, ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಸಹ ಕನ್ನಡ ಸಾಹಿತ್ಯರಚನೆ, ಕಥೆಕವನ, ಕಾದಂಬರಿಗಳನ್ನು ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ಲೇಖಕರು ಹಾಗೂ ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಶ್ರೀ ದೇಶಪಾಂಡೆ ಹೇಳಿದರು.
ನಗರದ ಚಾಮರಾಜನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ “ಅಕ್ಕಮಹಾದೇವಿ ಸಭಾಭವನ”ದಲ್ಲಿ ಫೇಸ್ ಬುಕ್ ಬಳಗದ “ಕನ್ನಡ-ಕಥಾಗುಚ್ಚ” ಬರಹಗಳ ಕೈಪಿಡಿ ಸಾಹಿತ್ಯ ಸಂಘಟನೆಯ ವತಿಯಿಂದ ಏರ್ಪಡಿಸಲಾಗಿದ್ದ 8ನೇ ವಾರ್ಷಿಕೋತ್ಸವದ “ಸಮಾರೋಪ ಸಮಾರಂಭ”ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ “ಕನ್ನಡ-ಕಥಾಗುಚ್ಚ” ಸಾಹಿತ್ಯ ಸಂಘಟನೆಯು ಒಂದು ಅಳಿಲು ಸೇವೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು, ಹಲವಾರು ಕವಿಗಳು, ಸಾಹಿತಿಗಳು, ಲೇಖಕರುಗಳನ್ನು ನಮ್ಮ ಕಥಾಗುಚ್ಚ ಸಂಘಟನೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ, ಇಂತಹ ಕನ್ನಡ ಸಾಹಿತ್ಯ ವೇದಿಕೆ ಇನ್ನೂ ದೊಡ್ಡದಾಗಿ ಬೆಳೆದು ಕನ್ನಡ ಸಾಹಿತ್ಯವನ್ನು ಅಭಿವೃದ್ಧಿ ಪಡಿಸುವಂತಹ ನಾರಾರು ಲೇಖಕರು, ಸಾಹಿತಿಗಳನ್ನು ಸೃಷ್ಟಿಸುವಂತಹ ವೇದಿಕೆಯಾಗಲಿ ಎಂಬುದಾಗಿ ಅವರು ಹೇಳಿದರು.

ಸಾಹಿತ್ಯರತ್ನ ಪ್ರಶಸ್ತಿಪುರಸ್ಕೃತರಾದ ಕೆ.ವಿ.ಶಶಿಧರ್ ಮಾತನಾಡಿ, ನಮ್ಮ “ಕನ್ನಡ-ಕಥಾಗುಚ್ಚ” ಸಾಹಿತ್ಯ ಸಂಘಟನೆಯು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸಹೊಸ ಪ್ರತಿಭೆಗಳನ್ನು ಪರಿಚಯಿಸುವ ಉದ್ದೇಶದಿಂದ ರೂಪುಗೊಂಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ಜನರ ಮನೆ-ಮನಗಳನ್ನು ತಲುಪುತ್ತಿದೆ, ಅಲ್ಲದೆ ವರ್ಷದಿಂದ ವರ್ಷಕ್ಕೆ ಹೆಚ್ಚುಹೆಚ್ಚು ಸದಸ್ಯರುಗಳನ್ನು ತನ್ನೆಡೆಗೆ ಆಕರ್ಷಿಸುತ್ತಾ ಬೃಹತ್ ಮಟ್ಟದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಿದೆ ಎಂಬುದಾಗಿ ಹೇಳಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ.ಮಲ್ಲಾರೆಡ್ಡಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಇಷ್ಟೊಂದು ಜನರನ್ನು ನೋಡಿದರೆ ನಮ್ಮ ಕಥಾಗುಚ್ಚ ಸಂಘಟನೆ ಎಷ್ಟೊಂದು ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದೆ ಎಂಬುದು ನಿಜಕ್ಕೂ ಹೆಮ್ಮೆಯಾಗುತ್ತದೆ, ಈ “ಕನ್ನಡ-ಕಥಾಗುಚ್ಚ” ಸಾಮಾಜಿಕ ಜಾಲತಾಣವು ಇನ್ನೂ ಹೆಚ್ಚು ವಿಸ್ತಾರಗೊಂಡು ದೇಶ ವಿದೇಶಗಳ ಜನರನ್ನು ತಲುಪುವ ಮೂಲಕ ಎಲ್ಲರ ಮನೆಮಾತಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂಬುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಕಥಾಗುಚ್ಚ ಸಂಸ್ಥಾಪಕರಾದ ಶ್ರೀಮತಿಲತಾಜೋಶಿ ಮಾತನಾಡಿ, ಈ ಕಥಾಗುಚ್ಚ ಸಂಘಟನೆಯ ನಿರ್ವಹಣೆಯು ಕೇವಲ ಒಬ್ಬರಿಂದ ಸಾಧ್ಯವಿಲ್ಲ, ಸಂಘಟನೆಯ ಎಲ್ಲಾ ಸಂಘಟಕರು, ನಿರ್ವಾಹಕರು, ಸಂಯೋಜಕರು, ಪ್ರಾಯೋಜಕರುಗಳ ಸಹಕಾರದಿಂದ ನಮ್ಮ ಕಥಾಗುಚ್ಚ ಸಾಹಿತ್ಯ ಸಂಘಟನೆ 7 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, 8ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುವ ಹಂತ ತಲುಪಿದೆ, ಇನ್ನು ಮುಂದೆಯೂ ಸಹ ನಿಮ್ಮೆಲ್ಲರ ಸಹಾಯ, ಸಹಕಾರ ನಮ್ಮ ಕಥಾಗುಚ್ಚ ಸಂಘಟನೆಗೆ ಅಗತ್ಯವಾಗಿದ್ದು, ಕಥಾಗುಚ್ಚ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ನಿಮ್ಮೆಲ್ಲರಿಗೂ ನಮ್ಮ ಕಥಾಗುಚ್ಚ ಸಂಘಟನೆಯ ಪರವಾಗಿ ಅಭಿನಂದನೆಗಳು ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕರು ಹಾಗೂ ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಶ್ರೀ ದೇಶಪಾಂಡೆ, ಸಾಹಿತ್ಯರತ್ನ ಪ್ರಶಸ್ತಿಪುರಸ್ಕೃತರಾದ ಕೆ.ವಿ.ಶಶಿಧರ್, ಹಿರಿಯ ಸಾಹಿತಿಗಳು ಹಾಗೂ ಕಥಾಗುಚ್ಚ ಸಂಘಟಕರಾದ ಶ್ರೀಮತಿ ವಿಜಯಲಕ್ಷ್ಮಿಮಳಿಯೆ, ಹಿರಿಯಸಾಹಿತಿಗಳು, ರಂಗಕರ್ಮಿಗಳಾದ ಡಾ.ಎಂ.ಬೈರೇಗೌಡರು, ಶಿಕ್ಷಕರು ಮತ್ತು ಲೇಖಕರಾದ ಕುಮಾರಿಹರ್ಷಿಯಾಭಾನು, ಸಾಹಿತಿಗಳು, ನಾಣ್ಯ ಮತ್ತು ಅಂಚೆಚೀಟಿ ಸಂಗ್ರಹಕಾರರಾದ ಶ್ರೀವಿಶ್ವನಾಥಕೃಷ್ಣರಾವ್, ಈ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಕಥಾಗುಚ್ಚ ಸಂಸ್ಥಾಪಕರಾದ ಶ್ರೀಮತಿ ಲತಾಜೋಶಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಸಾಹಿತಿಗಳಾದ ದುಂಡಿರಾಜ್, ಹೆಸರಾಂತ ಅಂಕಣಕಾರರು ಹಾಗೂ ಪತ್ರಕರ್ತರಾದ ಅಣುಕು ರಾಮನಾಥ್, ಲೇಖಕರು ಹಾಗೂ ಹಿರಿಯ ಸಾಹಿತಿಗಳಾದ ಶ್ರೀಮತಿ ಜಯಶ್ರೀ ದೇಶಪಾಂಡೆ, ಕನ್ನಡ ಕಥಾಗುಚ್ಚ ಸಂಸ್ಥಾಪಕ ಸಂಯೋಜಕರಾದ ಶ್ರೀಮತಿ ಸುಮಾಕಳಸಾಪುರ, ಸಾಹಿತಿಗಳು ಹಾಗೂ ಹಿರಿಯ ಸಂಘಟಕರಾದ ಕೆ.ವಿ.ಶಶಿಧರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಿ.ಮಲ್ಲಾರೆಡ್ಡಿ, ಕಥಾ ಸ್ಪರ್ಧೆಯ ಪ್ರಾಯೋಜಕರಾದ ಹರೀಶ್ ಬೇದ್ರೆ, ಕವನಸ್ಪರ್ಧೆಯ ಪ್ರಾಯೋಜಕರಾದ ಶ್ರೀಮತಿಸಂದ್ಯಾಬಾದಾಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪ, ಲಲಿತಾಬೆಳವಾಡಿ, ಸಂಘಟಕರುಗಳಾದ ರಮೇಶ್ ಮರಸಂಕ, ಪೂರ್ಣಿಮಾಮರಳಿಹಳ್ಳಿ, ಸುಜಾತರೆಡ್ಡಿ, ಚಂದ್ರಶೇಖರ್, ಅನಿತಾ, ಕೃಷ್ಣಮೂರ್ತಿ, ಛಾಯಾಗ್ರಾಹಕರಾದ ವೆಂಕಟೇಶಮೂರ್ತಿ, ಮಂಜುಳಾಚಿಕ್ಕಣ್ಣ, ಶ್ರೀಮತಿಸರಸ್ವತಿ, ಚಂದ್ರಶೇಖರ್, ಶ್ರೀಮತಿಜ್ಯೋತಿರಾಜೇಶ್ ಹಾಗೂ ಬಾಹುಬಲಿ ಸೇರಿದಂತೆ ಕಥಾಗುಚ್ಚದ ನೂರಾರು ಜನಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading