ವರದಿ: ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ವಚನ ಸಂಗೀತ ಎಲ್ಲೆಡೆ ಪಸರಿಸಲಿ ಎಂದು ಮತ್ತೋಡು ಸನ್ ಶೈನ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಸಫಾರಿ ಎಂ ಶಿವಲಿಂಗಪ್ಪ ತಿಳಿಸಿದರು.
ಶ್ರೀ ಗುರು ರಾಘವೇಂದ್ರ ಸಾಂಸ್ಕ್ರತಿಕ ಕಲಾ ಸಂಘ (ರಿ) ಹೊಸದುರ್ಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಇವರ ಸಹಯೋಗದಲ್ಲಿ ತಾಲೂಕಿನ ಮತ್ತೋಡು ಸನ್ ಶೈನ್ ಪಬ್ಲಿಕ್ ಶಾಲೆಯ ಸಭಾಂಗಭಣದಲ್ಲಿ ಶನಿವಾರ ನಡೆದ ವಚನ ಸಂಗೀತ ಕಾರ್ಯಕ್ರಮವನ್ನು ತಬಲ ನುಡಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
೧೨ ನೇ ಶತಮಾನದ ಬಸವಾದಿ ಶರಣರು ಮಾನವನ ಬದುಕಿಗೆ ವಚನಗಳನ್ನು ರಚಿಸಿ ಆದರ್ಶನೀಯ ಬದುಕು ಹೇಗೆ ಇರಬೇಕೆಂದು ತೋರಿಸಿ ಕೊಟ್ಟಿದ್ದಾರೆ ಈ ವಚನಗಳ ಸಾರ ಸರ್ವ ಕಾಲಕ್ಕೂ ಶ್ರೇಷ್ಠ ಇಂತಹ ವಚನಗಳ ಸಾರ ಸಂಗೀತದ ಮೂಲಕ ಮಾನವನ ಬದುಕಿಗೆ ಸ್ಪೂರ್ತಿ ನೀಡಲಿ ಎಂದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಸಂಘ ಸಂಸ್ಥೆಗಳ ಅಡಿಯಲ್ಲಿ ನಡೆಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌಮ್ಯ ಮಾತನಾಡಿ ಸಂಗೀತ ದ ಮೂಲಕ ವಚನಗಳ ಸಾರ ವನ್ನು ಬಿತ್ತುವ ಕೆಲಸ ನಿಜಕ್ಕೂ ಶ್ಲಾಘನೀಯ ಇಂತಹ ಕಾರ್ಯಕ್ರಮ ಗಳು ಹೆಚ್ಚು ಹೆಚ್ಚು ನಡೆಯುವಂತಾಗಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಪರಮೇಶ್ವರಪ್ಪ , ತಬಲಾಜಿ ಚಂದ್ರಪ್ಪ, ಓ.ಮೂರ್ತಿ, ಸರಸ್ಪತಿ, ಶಶಿಕುಮಾರ್, ವೆಂಕಟೇಶ್, ಚಿತ್ರದುರ್ಗದ ಮಧು ಸೇರಿದಂತೆ ಮತ್ತಿತರರು ಉಪಸ್ಧಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.