July 11, 2026
IMG-20260711-WA0139

ವರದಿ: ಕೆ.ಟಿ.ಮೋಹನ್ ಕುಮಾರ್

ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಚಂದನ ಪಾಲಿ ಕ್ಲಿನಿಕ್ ನಲ್ಲಿ ಉಚಿತ ಕಣ್ಣಿನ ಹಾಗೂ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಶನಿವಾರ ಮಾಡಲಾಯಿತು.

ಮೈಸೂರಿನ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಕ್ಲಿಯರ್ ಮೇಡಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪಟ್ಟಣದ ಚಂದನ ಪಾಲಿ ಕ್ಲಿನಿಕ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಾಲಿಗ್ರಾಮ ಪಟ್ಟಣದ ಮಹಾವೀರ ರಸ್ತೆಯಲ್ಲಿರುವ ಚಂದನ ಪಾಲಿ ಕ್ಲಿನಿಕ್ ನಲ್ಲಿ ವೈದ್ಯರುಗಳಾದ ಡಾ.ಶಿವಾನಿ ನಾಯಕ್, ಡಾ.ಸಿಂಚನ ಅವರುಗಳ ತಂಡವು ತಪಾಸಣೆಯನ್ನು ನಡೆಸಿದರು.

ಶಿಬಿರದಲ್ಲಿ ಸಮಗ್ರ ಕಣ್ಣಿನ ತಪಾಸಣೆ, ದೃಷ್ಟಿ ಪರೀಕ್ಷೆ ಹಾಗೂ ಕಣ್ಣಿನ ಕನ್ನಡಕ ಸಲಹೆ, ಸಾಮಾನ್ಯ ಆರೋಗ್ಯ ತಪಾಸಣೆ, ರಕ್ತದ ಒತ್ತಡ ಮತ್ತು ಸಕ್ಕರೆ ಪರೀಕ್ಷೆ ಸೇರಿದಂತೆ ವಿವಿಧ ತಪಾಸಣೆಗಳನ್ನು ನಡೆಸಲಾಯಿತು.

ಪ್ರತಿ ತಿಂಗಳ 2ನೇ ಶನಿವಾರದಂದು ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಸಾಲಿಗ್ರಾಮ ಪಟ್ಟಣದ ಚಂದನ ಪಾಲಿ ಕ್ಲಿನಿಕ್ ನಲ್ಲಿ ಮಾಡಲಾಗುವುದು ಈ ಶಿಬಿರದ ಸದುಪಯೋಗವನ್ನು ಸಾರ್ವಜನಿಕರು ಮಾಡಿಕೊಳ್ಳಬೇಕೆಂದು ಶಿಬಿರದ ವ್ಯವಸ್ಥಾಪಕರು ಹಾಗೂ ಚಂದನ ಪಾಲಿ ಕ್ಲಿನಿಕ್ ನ ಗೋಪಾಲ್ ಅವರು ಮನವಿ ಮಾಡಿದರು.

ಈ ಶಿಬಿರದಲ್ಲಿ ಎಸ್.ಎನ್.ಚಂದನ್, ನಂದೀಶ್, ಎಸ್.ಎಂ.ಶರತ್, ಎಸ್.ಎನ್.ಧೀರೇಂದ್ರ ಸೇರಿದಂತೆ ಹಲವರು ಕಾರ್ಯನಿರ್ವಹಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading