May 20, 2026

ಚಿತ್ರದುರ್ಗ ಮೇ.19:
ಸೋಮವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 12.7 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 11.7 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 10.4 ಮಿ.ಮೀ, ಹಿರಿಯೂರು ತಾಲ್ಲೂಕು 9.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 8.5 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 26.5 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 5.8 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 7.6 ಮಿ.ಮೀ, ನಾಯಕನಹಟ್ಟಿ 19.9 ಮಿ.ಮೀ, ಪರಶುರಾಂಪುರ 8.4 ಮಿ.ಮೀ, ತಳಕು 12.7 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 15.9 ಮಿ.ಮೀ, ಭರಮಸಾಗರ 9 ಮಿ.ಮೀ, ಹಿರೇಗುಂಟನೂರು 5.6 ಮಿ.ಮೀ, ತುರುವನೂರು 6.3 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 14.4 ಮಿ.ಮೀ, ಐಮಂಗಲದಲ್ಲಿ 14.3 ಮಿ.ಮೀ, ಧರ್ಮಪುರದಲ್ಲಿ 6.3 ಮಿ.ಮೀ, ಜವನಗೊಂಡನಹಳ್ಳಿ 3.5 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 9.9 ಮಿ.ಮೀ, ಬಿ.ದುರ್ಗ 10.1 ಮಿ.ಮೀ, ರಾಮಗಿರಿ 11.7 ಮಿ.ಮೀ, ತಾಳ್ಯ 3.9 ಮಿ.ಮೀ ಮಳೆಯಾಗಿದೆ. ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 50.1 ಮಿ.ಮೀ, ಮಾಡದಕೆರೆ 9 ಮಿ.ಮೀ, ಮತ್ತೋಡು 18.1 ಮಿ.ಮೀ, ಶ್ರೀರಾಂಪುರ 26.4 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 10.9 ಮಿ.ಮೀ ಹಾಗೂ ದೇವಸಮುದ್ರದಲ್ಲಿ 0.1 ಮಿ.ಮೀ ಮಳೆಯಾಗಿದೆ.
26 ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲೆಯಾದ್ಯಂತ 26 ಮನೆಗಳು ಭಾಗಶಃ ಹಾಗೂ 1 ಮನೆ ಸಂಪೂರ್ಣ ಹಾನಿಯಾಗಿವೆ. 3 ಸಣ್ಣ ಜಾನುವಾರು ಹಾನಿ, 20 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಹಾಗೂ 5 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ.
ಚಳ್ಳಕೆರೆ ತಾಲ್ಲೂಕಿನಲ್ಲಿ 2 ಮನೆ ಭಾಗಶಃ ಹಾನಿ ಹಾಗೂ 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 3 ಮನೆ ಭಾಗಶಃ ಹಾನಿ, 1 ಸಣ್ಣ ಜಾನುವಾರು ಹಾಗೂ 15 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 9 ಮನೆ ಭಾಗಶಃ ಹಾನಿ, 2.5 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 1 ಮನೆ ಪೂರ್ಣ ಹಾನಿ 6 ಮನೆಗಳ ಭಾಗಶಃ ಹಾನಿ ಹಾಗೂ 5 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ಹಾಗೂ 0.2 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 2 ಸಣ್ಣ ಜಾನುವಾರು, 6 ಮನೆಗಳು ಭಾಗಶಃ ಹಾನಿ ಹಾಗೂ 0.3 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
=========

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading