ವರದಿ:ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪ್ರಪಂಚದ ಇತರ ದೇಶಗಳಲ್ಲಿ ಭಾರತದ ಯುವಕರೇ ಹೆಚ್ಚಾಗಿ ಕೌಶಲ್ಯಗಳನ್ನು ಹೊಂದಿರುವ ಕಾರಣಕ್ಕಾಗಿ ಕೆಲಸಗಳನ್ನು ಸಂಪಾದಿಸಿ ಇಡೀ ಪ್ರಪಂಚದ ಆರ್ಥಿಕ ಪರಿಸ್ಥಿತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅತ್ಯುನ್ನತ ಪದವಿಗಳಲ್ಲಿ, ಹಲವಾರು ಕಂಪನಿಗಳ ಸಿ ಇ ಓ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆಎಸ್ ಕಲ್ಮಠ್ ತಿಳಿಸಿದರು.
ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹೊಸದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯರ ಯುವ ಜನತೆಯ ಕೌಶಲ್ಯವೇ ಇಡೀ ಪ್ರಪಂಚದ ನಿಜವಾದ ಶಕ್ತಿ- ನಶೆ ಮುಕ್ತ ಯುವ ವಿಕಸಿತ್ ಭಾರತ್ ಸಂಕಲ್ಪ ಅಭಿಯಾನದ ಎಂಟನೇ ವಾರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವೈಶಿಷ್ಟ್ಯ ಹೊಂದಿರುವ ಭಾರತೀಯರ ಯುವ ಜನತೆಗೆ ನಶೆಯನ್ನು ಮೈಗೂಡಿಸಿ ಅವರ ಆರೋಗ್ಯ ಕೆಡುವಂತೆ ಮಾಡಿ ಅತಿ ಕಡಿಮೆ ವಯಸ್ಸಿನಲ್ಲಿಯೇ ಕ್ಯಾನ್ಸರ್, ಹಾರ್ಟ್ ಅಟ್ಯಾಕ್, ಇನ್ನಿತರ ಮಾರಕ ಕಾಯಿಲೆಗಳಿಗೆ ತುತ್ತಾಗಿ ಆರೋಗ್ಯವಲ್ಲದೆ ದೇಶದ ಪ್ರಗತಿ ಕುಂಠಿತವಾಗಲು ಡ್ರಗ್ಸ್ ಮತ್ತು ದುಶ್ಚಟಗಳನ್ನು ಪ್ರೇರೇಪಿಸುತ್ತಿದ್ದಾರೆ. ಆದ್ದರಿಂದ ಆರೋಗ್ಯಕ್ಕೆ ಮನೆಯ ಆಹಾರ ಉತ್ತಮ, ಆರ್ಥಿಕ ಪ್ರಗತಿಗೆ ಕೌಶಲ್ಯ ಮತ್ತು ನೆಮ್ಮದಿಗೆ ಒಳ್ಳೆಯ ಅಭ್ಯಾಸಗಳು ರೂಡಿಸಿಕೊಳ್ಳಿರಿ ಎಂದರು.
ಉಪನ್ಯಾಸಕ ನಿಸಾರ್ ಅಹಮದ್ ಮಾತನಾಡಿ ನಮ್ಮ ಯುವ ಜನತೆಯನ್ನು ಉದ್ದೇಶಪೂರ್ವಕವಾಗಿ ಡ್ರಗ್ಸ್ ಮತ್ತು ದುಶ್ಚಟಗಳಿಂದ ದೂರವಿರಲು ನಿರಂತರವಾಗಿ ಜಾಗೃತಿಗೊಳಿಸಲಾಗುತ್ತಿದೆ. ನಮ್ಮ ಯುವಕರಿಗೆ ನಾವು ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ನೆರವಾಗುಣ ಎಂದರು.
ಪ್ರಾಚಾರ್ಯ ಚಂದ್ರಶೇಖರಪ್ಪ ಜಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಉಪನ್ಯಾಸಕ ಮುರುಗೇಶ್ ಆರ್, ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಅಕಾಡೆಮಿ ಡೈರೆಕ್ಟರ್ ಎಂ.ಬಿ ತಿಪ್ಪೇಸ್ವಾಮಿ ಪಿಯು ಕಾಲೇಜಿನ ಪ್ರಾಂಶುಪಾಲ ದಯಾನಂದ್ ಈ ಆರ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.