ವರದಿ:ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬರ ತಾಂಡವಾಡುತ್ತಿದೆ.ಹೊಸದುರ್ಗ ತಾಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾತ್ರ ಮಾಡಿದ್ದಾರೆ ಆದರೆ ಇಲ್ಲಿಯವರೆಗೂ ಕೂಡ ರೈತರಿಗೆ ಬರ ಪರಿಹಾರ ಬಂದಿಲ್ಲ ರೈತರ ಜೀವನ ತುಂಬಾ ಕಷ್ಟಕರವಾಗಿದೆ ಬ್ಯಾಂಕಿನಲ್ಲಿ ಸಾಲ ಮಾಡಿ. ಕೈ ಸಾಲ ಮಾಡಿ ಬಿತ್ತನೆ ಮಾಡಿದ ಸಾವಿರಾರು ಎಕರೆ ಬೆಳೆಗಳು ಬರಗಾಲದಿಂದ ನಾಶವಾಗಿದೆ ಜನಸಮಾನ್ಯರಿಗೆ ಮತ್ತು ರೈತರಿಗೆ ಹೋರೆಯಾಗುತ್ತಿರುವ ಕಾಂಗ್ರೇಶ್ ಸರ್ಕಾರವಾಗಿದೆ ಎಂದು ತಾಲೂಕು ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ್ ತೀರ್ವವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ವಿಚಾರವಾಗಿ ತಾಲೂಕಿನ ಶಾಸಕರಾದ ಬಿ.ಜಿ.ಗೋವಿಂದಪ್ಪನವರು ವಿಧಾನಸಭೆಯಲ್ಲಿ ಒಂದು ದಿನವಾದರೂ ಪ್ರಶ್ನೆ ಮಾಡಿಲ್ಲ, ಇನ್ನೂ ಸಾವಿರಾರು ಜನರಿಗೆ ವೃದ್ಯಾಪ್ಯ ವೇತನ ಬಂದಿಲ್ಲ, ಇದರಿಂದ ಹಿರಿಯ ನಾಗರಿಕರಿಗೆ ಜೀವನ ಮಾಡುವುದು ಕಷ್ಟವಾಗುತ್ತಿದೆ. ಇನ್ನೂ ಹಳ್ಳಿಗಳಲ್ಲಿ ರಸ್ತೆ ಗುಂಡಿಗಳು ಹೆಚ್ಚುತ್ತಿದೆ ಸದ್ಯಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ರೈತರು ಮತ್ತು ಜನಸಾಮಾನ್ಯರ ಮೇಲೆ ಯಾವುದೇ ರೀತಿಯ ಕಾಳಜಿ ಇಲ್ಲ ಎಂದು ಆರೋಪಿಸಿರುವ ಅವರು ನಮ್ಮ ಶಾಸಕರು ನಮ್ಮ ತಾಲೂಕಿನ ಸಮಗ್ರ ಸಮಸ್ಯೆಗಳನ್ನ ವಿಧಾನ ಸಭೆಯಲ್ಲಿ ಪ್ರಶ್ನಿಸುವುದರ ಮೂಲಕ ಪ್ರಸ್ತಾಪ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.