ನಾಯಕನಹಟ್ಟಿ:. ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ . ಎಸ್.ಸುರೇಶ್ ತಿಳಿಸಿದರು.
ಮಂಗಳವಾರ ಸಮೀಪದ ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ 2026 27 ನೇ ಸಾಲಿನ ಮಲ್ಲೂರಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಕಲೆ ಇರುತ್ತದೆ ಅದನ್ನು ಗುರುತಿಸುವ ಕಾರ್ಯವನ್ನು ಮನೆಯಲ್ಲಿ ಪೋಷಕರು ಶಾಲೆಯಲ್ಲಿ ಶಿಕ್ಷಕರು ಮಾಡಬೇಕಾಗಿದೆ ಮಕ್ಕಳನ್ನು ಸಾಹಿತ್ಯ ಸೇರಿದಂತೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಬೇಕು ಜೊತೆಗೆ ಮಕ್ಕಳು ಮೊಬೈಲ್ ನಿಂದ ದೂರ ಇರುವಂತೆ ಜಾಗೃತಿ ವಹಿಸಬೇಕು ಎಂದರು.
ಬಿ ಆರ್ ಸಿ ಮಂಜುನಾಥ್ ಸಿಆರ್ ಪಿ ಅರುಣ್ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಎಚ್. ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್. ತಿಪ್ಪೇರುದ್ರಪ್ಪ,
ಶಾಲೆಯ ಮುಖ್ಯ ಶಿಕ್ಷಕ ಆರ್. ನಾರಾಣಿ ನಾಯ್ಕ, ಪ್ರಶಸ್ತಿ ದಾನಿಗಳು, ನಿವೃತ್ತ ಸೈನಿಕ ಟಿ. ಪಾಂಡುನಾಯ್ಕ, ಕೃಷ್ಣ ನಾಯ್ಕ, ರವೀಂದ್ರ ನಾಯ್ಕ, ಮಲ್ಲಿಕಾರ್ಜುನ, ರಾಮಸ್ವಾಮಿ, ಉಮಾ, ನಿರ್ಮಲಾ, ಗುಡ್ಡದ ಕಪಿಲೆ ಶಾಲೆ ಶಿಕ್ಷಕಿ ಸೌಭಾಗ್ಯ, ವಿಜಯಕುಮಾರ್, ರಾಮಚಂದ್ರ ಮರೆಕ್ಕನವರು, ಎಚ್.ಟಿ. ಮಂಜುನಾಥ್, ಪರುಶುರಾಮ್, ಸೇರಿದಂತೆ ಮಲ್ಲೂರಹಳ್ಳಿ ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಶಿಕ್ಷಕಿಯರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.
