ವರದಿ:ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪ್ರತಿಯೊಂದು ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದೆ ಇರುತ್ತದೆ,ಅಂತಹ ಪ್ರತಿಭೆಗಳನ್ನು ಹೊರ ಹಾಕುವ ಕೆಲಸ ಹಾಗಬೇಕು, ಸರ್ಕಾರದ ಇಂತಹ ಕಾರ್ಯಕ್ರಮಗಳು ಮಕ್ಕಳ ಸುಪ್ತ ಪ್ರತಿಭೆಗಳು ಹೊರಹೊಮ್ಮಲು, ಸಂಪನ್ನತೆಯನ್ನು ಹೆಚ್ಚಿಸಲು ಸಹಕಾರಿ ಎಂದು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ವಿಜೇತರಾದ ೮೧ ಮಕ್ಕಳಿಗೆ ಬಹುಮಾನಗಳ ಪ್ರಾಯೋಜಕರು ಹಾಗೂ ಎನ್.ಎಲ್ ಪಿ. ಕೆ ಟ್ರಸ್ಟ್ ಅಧ್ಯಕ್ಷ ಪಿ.ಕೆ ಪರಪ್ಪ ಅಭಿಪ್ರಾಯಿಸಿದರು.
ತಾಲೂಕಿನ ಬಾಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಯಲ್ಲಿ ಆಯೋಜಿಸಲಾಗಿದ್ದ ೨೦೨೬ – ೨೭ ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ ಕೆ ಅಶೋಕ್ ಮಕ್ಕಳ ಪ್ರತಿಭೆಯನ್ನು ಕಾರಂಜಿಯ ರೂಪದಲ್ಲಿ ಚಿಮ್ಮಿಸುವ ಕೆಲಸವನ್ನು ಶಾಲಾ ಶಿಕ್ಷಕರು ಮಾಡುತ್ತಿದ್ದಾರೆ, ತಾಲ್ಲೂಕಿನ ಸ ಹಿ ಪ್ರಾ ಶಾಲೆ ಕಬ್ಬಳ ಶಾಲೆಯ ಮಕ್ಕಳು ಇನ್ಸ್ಪೆರ್ ಅವಾರ್ಡ್ ವಿಷಯದಲ್ಲಿ ರಾಷ್ಟ್ರಮಟ್ಟಕ್ಕೆ ಹೋಗಿರುವುದು ಹೆಮ್ಮೆಯ ವಿಷಯ ಎಂಬ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಸರಿತ ಪ್ರಾಸ್ತವಿಕವಾಗಿ ಮಾತನಾಡಿದರು. ಬಾಗೂರು ಶಾಲೆಯ ಬಡ್ತಿ ಮುಖ್ಯ ಶಿಕ್ಷಕಿ
ಶಾರದಮ್ಮ ಸ್ವಾಗತಿಸಿದರು. ಸಹ ಶಿಕ್ಷಕಿ ಲಕ್ಷ್ಮಿ ನಿರೂಪಣೆ ಮಾಡಿದರು.
ಕ್ಲಸ್ಟರ್ನ ಎಲ್ಲಾ ೧೭ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.
