November 15, 2026
IMG-20261115-WA0287


ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಬರುವ ಡಿಸೆಂಬರ್ ೬ ರಂದು ಪಟ್ಟಣದ ಎಸ್ ನಿಜಲಿಂಗಪ್ಪ ಪಿ ಯು ಕಾಲೇಜಿನಲ್ಲಿ ರಾಜ್ಯಮಟ್ಟದ ಎಸ್.ಎನ್. ಮಾಸ್ಟರ್ ಮೈಂಡ್-೨೦೨೬’ ವಿದ್ಯಾರ್ಥಿವೇತನ ಪರೀಕ್ಷೆಯನ್ನ ಆಯೋಜಿಸಲಾಗಿದೆ ಎಂದು ಸಂಸ್ಧೆಯ ಕಾರ್ಯದರ್ಶಿ ಕೆ.ಎಸ್ ಕಲ್ಮಠ್ ತಿಳಿಸಿದ್ದಾರೆ.
ಪಟ್ಟಣದ ಎಸ್ ನಿಜಲಿಂಗಪ್ಪ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಎಸ್ ಎನ್ ಮಾಸ್ಟರ್ ಮೈಂಡ್-೨೦೨೬ ಪ್ರತಿಭಾನ್ವೇಷಣೆ ಪರೀಕ್ಷೆಯ ಮಾಹಿತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ತಾಲೂಕಿನ ಎಲ್ಲಾ ವಿದ್ಯಾರ್ಥಿಗಳು ಈ ಪ್ರತಿಭಾನ್ವೇಷಣೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಎಲ್ಲರೂ ಯಶಸ್ವಿಯಾಗಲಿ ಎಂದು ಹಾರೈಸಿದ ಅವರು ದಾವಣಗೆರೆ, ಶಿವಮೊಗ್ಗ, ಮಂಗಳೂರು, ತುಮಕೂರು ಬೆಂಗಳೂರುಗಳಲ್ಲಿ ಸಿಗುವಂತಹ ಅತ್ಯುತ್ತಮವಾದ ಪಿ ಯು ಸಿ ಕಾಲೇಜಿನ ಶಿಕ್ಷಣಕ್ಕೆ ಸಮನಾಗಿ ನಮ್ಮ ಎಸ್ ನಿಜಲಿಂಗಪ್ಪ ಪಿಯು ಕಾಲೇಜು ಗುಣಾತ್ಮಕ ಪೈಪೋಟಿ ಶಿಕ್ಷಣ ಕೊಡಲು ಸನ್ನದ್ಧವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಯು ಕಾಲೇಜಿನ ಅಕಾಡೆಮಿ ಡೈರೆಕ್ಟರ್ ಎಂ ಬಿ ತಿಪ್ಪೇಸ್ವಾಮಿ ಸಿಬಿಎಸ್ಸಿ ಮತ್ತು ಸ್ಟೇಟ್ ವಿಭಾಗದ ವಿದ್ಯಾರ್ಥಿಗಳು ೨೦೨೭ರ ವಾರ್ಷಿಕ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹಾಗೂ ಮುಂದಿನ ಪಿಯುಸಿ ಶಿಕ್ಷಣವನ್ನು ನಮ್ಮ ಎಸ್ ನಿಜಲಿಂಗಪ್ಪ ಪಿಯು ಕಾಲೇಜಿನಲ್ಲಿ ಯಾವುದೇ ಶೈಕ್ಷಣಿಕ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಅತ್ಯುತ್ತಮವಾದ ಕೌನ್ಸಿಲಿಂಗ್ ಮೂಲಕ ಸೈನ್ಸ್ ಮತ್ತು ಕಾಮರ್ಸ್ ವಿಭಾಗಗಳಲ್ಲಿ ದಾಖಲಾತಿಯನ್ನು ಪಡೆದುಕೊಂಡು ಅತ್ಯುತ್ತಮ ಭವಿಷ್ಯವನ್ನು ನಿಮ್ಮದಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ನಿಜಲಿಂಗಪ್ಪ ಪಿಯು ಕಾಲೇಜಿನ ಪ್ರಾಂಶುಪಾಲ ಎ.ಆರ್.ದಯಾನಂದ್, ವೀ ಟೆಕ್ನೋ ಕೋಆರ್ಡಿನೇಟರ್ ರತ್ನಕುಮಾರ್, ವಿ ಟೆಕ್ನೋ ದ ಮಹೇಶ್ ಸಿ.ಬಿ.ಎಸ್. ಸಿ. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜ್ವಾಲಾ ರೋ ಖಡೆ, ಎಂ. ಪಿ. ಪ್ರಕಾಶ್ ಪ್ರೌಢಶಾಲೆಯ ಕೋಆರ್ಡಿನೇಟರ್ ಸತೀಶ್ ಆರ್. ಪಿ. ಮುಖ್ಯೋಪಾಧ್ಯಾಯರಾದ ಕು. ಪುಷ್ಪ, ಮತ್ತು ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸೌಭಾಗ್ಯ ಸೇರಿದಂತೆ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading