ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ : ಪಟ್ಟಣದ ಎಸ್ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಎಂ.ಪಿ. ಪ್ರಕಾಶ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿಭಾಗೀಯ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಸ್ ಸ್ಪರ್ಧೆಯಲ್ಲಿ ನೂತನ ಎಸ್, ಆಯುಷ್ ಪಿ ಶ್ರೀನಿವಾಸ, ಹರ್ಷಿತ್ ಶರ್ಮಾ, ಟೆಕ್ವಾಂಡೋ ನಲ್ಲಿ ಉಲ್ಲಾಸ ಎಸ್.ಪಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೪ ವರ್ಷದೊಳಗಿನ ಬಾಲಕಿಯರ ವಿಭಾಗದ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಜ್ಞಾನದೀಪ ಎಸ್, ಅಂಜನಾ ಆರ್, ಧನ್ಯಶ್ರೀ ಬಿ.ಪಿ, ಬಾಲಕರ ವಿಭಾಗದಲ್ಲಿ ಗೋಕುಲ್ ರಾಮ್, ಷಣ್ಮುಖ ಬಿ.ಕೆ, ೧೭ ವರ್ಷದೊಳಗಿನ ಬಾಲಕರ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸ್ವರೂಪ ಪಿ.ಎಸ್, ಧನುಷ್ ಪಟೇಲ್ ಬಿ.ಎಸ್, ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಕಾವ್ಯಾಶ್ರೀ ಎಸ್.ಎಸ್, ಕ್ರಿಕೆಟ್ ನಲ್ಲಿ ಗಗನ್ ದೀಪ್ ಎಸ್.ಕೆ, ಮಹಮದ್ ರುಮಾನ್, ದೀಪಕ್ ಎ.ಪಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ, ವಿಭಾಗೀಯ ಮಟ್ಟ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಅಕಾಡೆಮಿಕ್ ನಿರ್ದೇಶಕ ಎಂ.ಬಿ. ತಿಪ್ಪೇಸ್ವಾಮಿ ಸೇರಿದಂತೆ ಧರ್ಮದರ್ಶಿಗಳು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.