June 18, 2026
IMG-20260618-WA0163

ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಕಾಂಗ್ರೇಸ್ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಂದ ಕಷ್ಟ ಪಟ್ಟು ದುಡಿಮೆ ಮಾಡದೆ ಜನರು ಸೋಮಾರಿಗಳಾಗುತ್ತಿದ್ದಾರೆ, ಗ್ಯಾರಂಟಿ ಯೋಜನೆಗಳನ್ನ ಕೈ ಬಿಟ್ಟು ಮೋದಲು ರೈತರ ಸಾಲ ಮನ್ನ ಮಾಡಿ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಜಿ. ಕಿರಣ್ ಸರ್ಕಾರವನ್ನ ಆಗ್ರಹಿಸಿದ್ದಾರೆ
ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಗುರುವಾರ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಬೂತ್ ಮಟ್ಟದ ಏಜೆಂಟರುಗಳ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲವನ್ನ ಮನ್ನಾ ಮಾಡಿದ್ದರು ಆದರೆ ಈಗಿನ ಕಾಂಗ್ರೇಸ್ ಸರ್ಕಾರ ರೈತರ ಬಗ್ಗೆ ಯಾವುದೇ ಅನುಕೂಲಕರವಾದ ಯೋಜನೆ ಮತ್ತು ಯೋಚನೆಗಳನ್ನ ಮಾಡುತ್ತಿಲ್ಲ ನಾಡಿಗೆ ಅನ್ನವನ್ನ ನೀಡುವ ರೈತರ ಬದುಕು ಇಂದು ದುಸ್ಧಿತಿಯಲ್ಲಿದೆ ಇದನ್ನ ಅರಿತು ರೈತರ ಸಾಲವನ್ನ ಮನ್ನ ಮಾಡಬೇಕು ಎಂದು ಒತ್ತಾಯಿಸಿದರು.
ನಿಕಟಪೂರ್ವ ಅಧ್ಯಕ್ಷ ಜಿ.ಗಣೇಶ್ ಮಾತನಾಡಿ ಚುನಾವಣೆಗಳು ಹತ್ತಿರ ಸಮೀಪಿಸುತ್ತಿವೆ, ಪಕ್ಷ ಸಂಘಟನೆಯಾಗಬೇಕು ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಿ ಪಕ್ಷವನ್ನ ಸಂಘಟಿಸುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಅಧಿಕಾರಕ್ಕೆ ಬರುವಂತೆ ದುಡಿಯಬೇಕು ಮತ್ತೆ ಕುಮಾರಸ್ವಾಮಿಯವರನ್ನ ಮುಖ್ಯ ಮಂತ್ರಿಯನ್ನಾಗಿ ಮಾಡುವ ಮೂಲಕ ಪಕ್ಷಕ್ಕೆ ಕೈ ಬಲ ಪಡಿಸಬೇಕು ಎಂದರು
ನಗರ ಘಟಕದ ಅಧ್ಯಕ್ಷ ಎಲ್ ಮಂಜುನಾಥ ಮಾತನಾಡಿ ಬೂತ್ ಮಟ್ಟದ ಏಜೆಟರುಗಳು ಪ್ರಾಮಾಣಿಕವಾಗಿ ಪಕ್ಷದ ಪರವಾಗಿ ಕೆಲಸ ಮಾಡಬೇಕು, ಪ್ರತಿಯೊಂದು ಮನೆ-ಮನೆಗೂ ಹೋಗಿ ಪಕ್ಷದ ಸಾಧನೆ ಮತ್ತು ಕೆಲಸ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸಬೇಕು, ಮುಂಬರುವ ಚುನಾವಣೆಗಳಿಗೆ ನಾವು ಎಲ್ಲರೂ ಸಹಾ ಶ್ರಮಿಸುವ ಮೂಲಕ ನಮ್ಮ ಪಕ್ಷ ಅಧಿಕಾರಕ್ಕೆ ಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು ಕಳೆದ ೨೦ ವರ್ಷಗಳಿಂದಲೂ ಸಹಾ ಹೊಸದುರ್ಗ ಪಟ್ಟಣದಲ್ಲಿ ಬಿಎಲ್‌ಎ ಗಳನ್ನು ನೇಮಕ ಮಾಡಿರಲಿಲ್ಲ, ಪ್ರಸ್ತುತ ವರ್ಷದಿಂದ ಪಟ್ಟಣದ ೨೩ ವಾರ್ಡುಗಳಿಗೂ ಸಹಾ ಬಿಎಲ್‌ಎ ಗಳನ್ನ ನೇಮಕ ಮಾಡುವ ಮೂಲಕ ಅವರಿಗೆ ಪಕ್ಷದ ಜವಾಬ್ದಾರಿಯನ್ನ ಕೊಡಲಾಗಿದೆ ಎಂದರು.
ಈ ಸಂಧರ್ಬದಲ್ಲಿ ಕಾರ್ಯಾಧ್ಯಕ್ಷ ಮಂಜುನಾಥ್, ಮುಖಂಡ ಅನ್ವರ್‌ಪಾಷ, ವೇದಾವತಿ ಸೇರಿದಂತೆ ಪಕ್ಷದ ಮುಖಂಡುಗಳು, ಕಾರ್ಯಕರ್ತರುಗಳು, ಬೂತ್ ಮಟ್ಟದ ಏಜೆಂಟರುಗಳು ಸೇರಿದಂತೆ ಮಹಿಳಾ ಕಾರ್ಯಕರ್ತರುಗಳು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading