July 25, 2026
IMG-20260725-WA0237

ಚಳ್ಳಕೆರೆ ವಿಧಾನ ಸಭ ಕ್ಷೇತ್ರವವ್ಯಾಪ್ತಿಯ ಚಿತ್ರದುರ್ಗ ತಾಲೂಕಿನ ಹಾಯಕಲ್ ಗ್ರಾಮದಲ್ಲಿ ಚರಂಡಿ ಸಮಸ್ಯೆ—ಬೋರಯ್ಯನ ಮನೆವರೆಗೆ ಚರಂಡಿ ನಿರ್ವಹಣೆ ಇಲ್ಲದೆ ಸಾಂಕ್ರಮಿಕ ರೋಗ ಭೀತಿಯಲ್ಲಿ ನಿವಾಸಿಗಳು.
ಹೌದು ಇದು ತುರುವನೂರು ಹೋಬಳಿಯ ಬೆಳಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಯಕಲ್ ಗ್ರಾಮದಲ್ಲಿ ರಂಗವನ್ನಳ್ಳಿ ಹನುಮಂತಪ್ಪನ ಮನೆ ಬಳಿಯಿಂದ ಸಣ್ಣಬೋರಯ್ಯನ ಮನೆವರೆಗೆ ಇರುವ ಚರಂಡಿ ನಿರ್ವಹಣೆ ಇಲ್ಲದೆ ಮುಚ್ಚಿ ಹೋಗಿದ್ದು, ಮಳೆಗಾಲದಲ್ಲಿ ನೀರು ಸರಿಯಾಗಿ ಹರಿಯದೆ ಮನೆಗಳ ಸುತ್ತ ನೀರು ನಿಲ್ಲುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚರಂಡಿ ಸರಿಯಾಗಿ ದುರಸ್ತಿ/ನಿರ್ಮಾಣವಾಗದೆ ಇರುವುದರಿಂದ ಸ್ವಚ್ಛತೆಗೆ ತೊಂದರೆಯಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಆತಂಕ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡಿದಾಗ ಗ್ರಾಮ ಪಂಚಾಯಿತಿಯಲ್ಲಿ ಅನುದಾನ ಇಲ್ಲ ಎಂದು ತಿಳಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಹೊಸ ಚರಂಡಿ ನಿರ್ಮಾಣ ಅಥವಾ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮಾನ್ಯ ಶಾಸಕರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ದುಸ್ತಿಗೆ ಮುಂದಾಗುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading