ನಾಯಕನಹಟ್ಟಿ-: ಬಾಲ್ಯದಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸ ಕಲಿಸಿ ಎಂದು ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಪೋಷಕರಿಗೆ ಕಿವಿಮಾತು ಹೇಳಿದರು.



ಶುಕ್ರವಾರ ಹೋಬಳಿಯ ಮಲ್ಲೂರಹಳ್ಳಿ ಗ್ರಾಮದಲ್ಲಿ ಶ್ರೀ ರಾಜಲಿಂಗಸ್ವಾಮಿ ಎಸ್. ಸಿ. /ಎಸ್. ಟಿ .ಮತ್ತು ವಿದ್ಯಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಶಯದಲ್ಲಿ ಶ್ರೀ ಮೂಗ ಬಸವೇಶ್ವರ ಹೈಟೆಕ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣಕ್ಕೆ ಒತ್ತು ನೀಡಬೇಕು ಅಕ್ಷರ ಅಭ್ಯಾಸವು ಮಕ್ಕಳಿಗೆ ಪ್ರಮುಖ ಮೈಲಿಗಲ್ಲಾಗಲಿದೆ ಎಂದರು.
ಕಾರ್ಯಕ್ರಮದ ಧಾರ್ಮಿಕ ವಿಧಿ-ವಿಧಾನಗಳನ್ನು ನಾಯಕನಹಟ್ಟಿ ಮಠದ ಬಿ.ಎಂ. ತಿಪ್ಪೇಸ್ವಾಮಿ ಶಾಸ್ರೋಕ್ತವಾಗಿ ನಡೆಸಿಕೊಟ್ಟರೆ, ಕೀರ್ತನೆ ಮೂಲಕ ಜೀವನದಲ್ಲಿ ಗುರುವಿನ ಸ್ಥಾನ ಎಷ್ಟು ಶ್ರೇಷ್ಠವಾದುದು ಎಂಬುದನ್ನು ತಿಳಿಸಿಕೊಟ್ಟರು.
ಮುಖ್ಯ ಶಿಕ್ಷಕಿ ಜೋತಿ, ಎಚ್. ಶಿಲ್ಪ, ಗೀತಾ, ಬಿ.ಓಬಕ್ಕೆ, ಓ ಸುಚಿತ್ರ, ಪಿ.ಸೌಮ್ಯ, ಜಿ.ಪಿ. ಪಾಲಾಕ್ಷ, ಸೇರಿದಂತೆ ವಿದ್ಯಾರ್ಥಿಗಳು ಪೋಷಕರು
ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.