May 22, 2026
FB_IMG_1779457081988.jpg

ಚಳ್ಳಕೆರೆ ನಗರದ ಮಾಜಿ ನಗರಸಭೆ ಸದಸ್ಯರಾದ ಆರ್. ಪ್ರಸನ್ನಕುಮಾರ್ ಅವರ ತಾಯಿಯವರಾದ ಶ್ರೀಮತಿ ಕಾಮಾಕ್ಷಮ್ಮ ಅವರು ಇಂದು ಸಂಜೆ ದೈವಾಧೀನರಾಗಿದ್ದಾರೆ.
ಅವರು ದಿವಂಗತ ವೈ.ಪಿ. ರಾಮಕೃಷ್ಣಚಾರ್ ಅವರ ಧರ್ಮಪತ್ನಿಯಾಗಿದ್ದು, ಚಂಗಾವರ ವಂಶದ ಯಂಜಲಗೆರೆಯವರಾಗಿದ್ದರು. ಮೃತರು ಮಲ್ಲಿಕಾರ್ಜುನಚಾರ್, ಬ್ರಹ್ಮಚಾರ್ ಹಾಗೂ ಆರ್. ಪ್ರಸನ್ನಕುಮಾರ್ ಅವರ ತಾಯಿಯಾಗಿದ್ದು, ಮಾಜಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಮಂಜುಳ ಪ್ರಸನ್ನಕುಮಾರ್ ಅವರ ಅತ್ತೆಯಾಗಿದ್ದರು.
ಮೃತರ ಅಂತಿಮ ಸಂಸ್ಕಾರವು ಮೇ 23ರಂದು ಶನಿವಾರ ಬೆಳಿಗ್ಗೆ 10:45ಕ್ಕೆ ಚಳ್ಳಕೆರೆ ಶಾಂತಿನಗರದ ನಿವಾಸದಿಂದ ಹೊರಟು ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಲಿದೆ.
ಮೃತರ ನಿಧನಕ್ಕೆ ಚಳ್ಳಕೆರೆ ತಾಲೂಕು ವಿಶ್ವಕರ್ಮ ಸಮಾಜ, ಚಿತ್ರದುರ್ಗ ಜಿಲ್ಲಾ ವಿಶ್ವಕರ್ಮ ಸಮಾಜ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನೆಗಳು ಸಂತಾಪ ಸೂಚಿಸಿವೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading