ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿ ವ್ಯಾಪ್ತಿಯ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶಿವು ಮಠ ಸ್ನೇಹ ಬಳಗದವರ ವತಿಯಿಂದ ಆಯೋಜಿಸಲಾಗಿದ್ದ “ಶಿವುಮಠ ರವರ ನಡೆ ಪ್ರತಿ ಹಳ್ಳಿಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಶಿವುಮಠ ಭಾಗವಹಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಶಿವುಮಠ ಅವರು ಮಾರಿಕಣಿವೆ ಗ್ರಾಮದ ಶ್ರೀ ಕಣಿವೆಮಾರಮ್ಮ ದೇವಿಯವರ ದೇವಾಲಯಕ್ಕೆ ಭೇಟಿ ನೀಡಿ ದೇವಿಯವರ ಆಶೀರ್ವಾದ ಪಡೆದರು. ಬಳಿಕ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಸ್ವಾಮಿಯವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ನಂತರ ದೇವಾಲಯದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವುಮಠ ಅವರು ತಮ್ಮ ಮುಂದಿನ ರಾಜಕೀಯ ಹೆಜ್ಜೆಗಳು, ಜನಸಂಪರ್ಕದ ಉದ್ದೇಶ ಹಾಗೂ “ಶಿವುಮಠ ರವರ ನಡೆ ಪ್ರತಿ ಹಳ್ಳಿಯ ಕಡೆ” ಕಾರ್ಯಕ್ರಮದ ಆಶಯಗಳ ಕುರಿತು ಕಾರ್ಯಕರ್ತರು, ಮುಖಂಡರು ಹಾಗೂ ಶಿವುಮಠ ಸ್ನೇಹ ಬಳಗದವರ ಸಮ್ಮುಖದಲ್ಲಿ ಮಾತನಾಡಿದರು.
ಇದೇ ವೇಳೆ ಪಕ್ಷ ಸಂಘಟನೆಯ ಬಲವರ್ಧನೆ, ಗ್ರಾಮ ಮಟ್ಟದಲ್ಲಿ ಕಾರ್ಯಕರ್ತರ ಸಕ್ರಿಯ ಪಾತ್ರ ಹಾಗೂ ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ಕುರಿತು ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಗ್ರಾಮಸ್ಥರು ಹಾಗೂ ಶಿವುಮಠ ಸ್ನೇಹ ಬಳಗದವರು ಉಪಸ್ಥಿತರಿದ್ದರು. ನಂತರ ಲಕ್ಕಿಹಳ್ಳಿ ಗ್ರಾಮದ ಶ್ರೀ ಮುದ್ದುಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು.
ಚಿತ್ರಶೀರ್ಷಿಕೆ-1: ಹೊಸದುರ್ಗ ತಾಲ್ಲೂಕಿನ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶಿವು ಮಠ ಸ್ನೇಹ ಬಳಗದವರ ವತಿಯಿಂದ ಆಯೋಜಿಸಲಾಗಿದ್ದ “ಶಿವುಮಠ ರವರ ನಡೆ ಪ್ರತಿ ಹಳ್ಳಿಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಮುಖಂಡ ಶಿವುಮಠ ಮಾತನಾಡಿದರು.
ಚಿತ್ರಶೀರ್ಷಿಕೆ-2: ಹೊಸದುರ್ಗ ತಾಲ್ಲೂಕಿನ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಶಿವು ಮಠ ಸ್ನೇಹ ಬಳಗದವರು ಪೂಜೆ ಸಲ್ಲಿಸಿದರು.
ವರದಿ: ನಾಗತಿಹಳ್ಳಿ ಮಂಜುನಾಥ್
About The Author
Discover more from JANADHWANI NEWS
Subscribe to get the latest posts sent to your email.