April 18, 2026
IMG-20260418-WA0222.jpg

ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಡಾ ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಯುವತಿಯರು ಪೂರ್ಣ ಕುಂಭ ಮೆರವಣಿಗೆ ನಡೆಸಿದರು.

ಅಸ್ವಸ್ಥ ಸಮಾಜಕ್ಕೆ ಚಿಕಿತ್ಸೆ ನೀಡಿದವರು ಡಾ. ಬಿ.ಆರ್ ಅಂಬೇಡ್ಕರ್. ಪಿಡಿಒ ರಮೇಶ್.

ನಾಯಕನಹಟ್ಟಿ-:ಡಾ. ಬಿ ಆರ್ ಅಂಬೇಡ್ಕರ್ ಅವರು ಮಾನವ ತವಾದಿ ಶ್ರೇಷ್ಠ ಚಿಂತಕ ಎಂದು ಪಿಡಿಒ ರಮೇಶ್ ಹೇಳಿದರು.

ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತ ಕೋಲಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಾ ನಾಯಕ
ಡಾ. ಬಿ.ಆರ್. ಅಂಬೇಡ್ಕರ್ ಸಂಘ( ರಿ). ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಗುಂತಕೋಲಮ್ಮನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ರವರ 135 ನೇ ಹಾಗೂ ಡಾ.ಬಾಬು ಜಗಜೀವನ್ ರಾಮ್ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಅಪಾರ ವಲವು ಹೊಂದಿದ್ದರು ಸಮಾಜದಲ್ಲಿದ್ದ ಅಸಮಾನತೆಯನ್ನು ಪ್ರಶ್ನಿಸಿದ ಅವರು ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ತಮ್ಮ ಅಶ್ಮಿತೆ ಕೊಂಡುಕೊಳ್ಳುವಂತೆ ಶೋಷಿತರಿಗೆ ಕರೆ ನೀಡಿದರು ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸುವಂತೆ ತಿಳಿಸಿದರು.

ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ,
ಗ್ರಾಮ ಪಂಚಾಯತಿ ಸದಸ್ಯರಾದ ಅನಿತಮ್ಮ ಜಿ.ಎಂ. ಜಯಣ್ಣ, ಪಟೇಲ್ ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಯ್ಯ, ಮಂಜಮ್ಮ ದುರುಗೇಶ್,
ಮುಖಂಡರಾದ ಮಾಜಿ ಗ್ರಾಮ್ ಪಂಚಾಯತಿ ಸದಸ್ಯ ಎಸ್ ಚಂದ್ರಣ್ಣ, ಮೀಸೆ ಓಬಯ್ಯ,ಜಿ.ಎಂ. ಜಯಣ್ಣ, ಎಸ್ .ತಿಪ್ಪೇಸ್ವಾಮಿ ಉಪನ್ಯಾಸಕರು ,ಎನ್. ತಿಪ್ಪೇಸ್ವಾಮಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ಹೊಸಕಪಿಲೆ ಬೋರಯ್ಯ, ವಿಷ್ಣು ಸಿಂಹ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್, ನಿರುವಾಣೆ ಗೌರಣ್ಣ, ಸೇರಿದಂತೆ ಹಟ್ಟಿಯ ಯಜಮಾನರು ಮತ್ತು ಯುವಕರು ಮಹಿಳೆಯರು ಮಸ್ತ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading