ಚಿತ್ರದುರ್ಗ ಏ.18:
ಮೈ ಭಾರತ್ ಕೇಂದ್ರ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ವತಿಯಿಂದ ಬೆಂಗಳೂರಿನಲ್ಲಿ ಈಚೆಗೆ ನಡೆದ “ಮೈ ಭಾರತ್ ಬಜೆಟ್ ಕ್ವೆಸ್ಟ್-2026”ರಲ್ಲಿ ಚಿತ್ರದುರ್ಗದ ದಂತ ವೈದ್ಯ ಡಾ.ಎಂ.ಆರ್.ದೀಕ್ಷಿತ್ ಕುಮಾರ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
2026ರ ಏಪ್ರಿಲ್ 12 ಮತ್ತು 13ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಇಂಟರ್‍ನ್ಯಾಷನಲ್ ಸೆಂಟರ್‍ನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ “ಮೈ ಭಾರತ ಬಜೆಟ್ ಕ್ವೆಸ್ಟ್ -2026”ರ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ಅವರು, ಪ್ರಧಾನಮಂತ್ರಿಯವರೊಂದಿಗೆ ನಡೆದ ರಾಷ್ಟ್ರೀಯ ಮಟ್ಟದ ವರ್ಚುಯಲ್ ಸಂವಾದದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಕಸಿತ ಭಾರತ್ ಬಜೆಟ್ ಕುರಿತಾದ ದೇಶಾದ್ಯಂತ ನಡೆದ ಈ ಸ್ಪರ್ಧೆಯಲ್ಲಿ ಸುಮಾರು 12ಲಕ್ಷಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.