July 6, 2026
IMG-20260706-WA0286



ಚಿತ್ರದುರ್ಗ, ಜು. 6: ಚಿತ್ರದುರ್ಗ ಜಿಲ್ಲಾ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಜಿ. ರಂಗನಾಥ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗದ ಉಪ ನಿರ್ದೇಶಕರ ಕಚೇರಿಯಲ್ಲಿ ಜುಲೈ 4ರಂದು ನಡೆದ ಸಭೆಯಲ್ಲಿ ಗಣಿತ ವಿಷಯ ಪರೀಕ್ಷಕರಾದ ನಿತ್ಯಾನಂದ ಬಿ.ಎಸ್. ಅವರ ನೇತೃತ್ವದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಖಜಾಂಚಿಗಳು ಭಾಗವಹಿಸಿ, ಚರ್ಚೆಯ ಬಳಿಕ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ಸಂಘದ ಗೌರವಾಧ್ಯಕ್ಷರಾಗಿ ನರಸಿಂಹಮೂರ್ತಿ, ಕಾರ್ಯದರ್ಶಿಯಾಗಿ ಡಿ.ಟಿ. ರಾಮಪ್ಪ, ಖಜಾಂಚಿಯಾಗಿ ನಿರಂಜನ್ ಯಾದವ್ ಜಿ.ವಿ., ಸಂಘಟನಾ ಕಾರ್ಯದರ್ಶಿಯಾಗಿ ಕೆ.ಆರ್. ಮಲ್ಲಿಕಾರ್ಜುನ್ ಹಾಗೂ ಸಹ ಕಾರ್ಯದರ್ಶಿಯಾಗಿ ಶ್ರೀ ವೆಂಕಟೇಶ್ ಆಯ್ಕೆಯಾದರು.
ಇದೇ ವೇಳೆ ನಿರ್ದೇಶಕರಾಗಿ ರಾಘವರೆಡ್ಡಿ, ವಿಜಯಕುಮಾರ್, ಪುಟ್ಟರಾಜ್ ನಾಯ್ಕ, ಮೋಹನ್ ಕುಮಾರ್, ಶ್ರೀಶೈಲ ಬಿ.ಟಿ., ಈರಸ್ವಾಮಿ, ಈಶ್ವರಪ್ಪ, ಮಲ್ಲಿಕಾರ್ಜುನ ಸ್ವಾಮಿ ಎಂ.ಆರ್., ರಾಜೇಶ್, ತಿಪ್ಪೇರುದ್ರಪ್ಪ, ಬಿ. ಅರುಣ್, ರಶ್ಮಿ ಕೆ.ಎಚ್., ಬಸವರಾಜ್ ಯು.ಆರ್. ಹಾಗೂ ರಾಮಚಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗಣಿತ ಶಿಕ್ಷಕರು ಶುಭಾಶಯಗಳನ್ನು ತಿಳಿಸಿ, ಸಂಘದ ಚಟುವಟಿಕೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಯಲಿ ಎಂದು ಹಾರೈಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading