ಚಳ್ಳಕೆರೆ ಡಿ.28
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದಲ್ಲಿ ಬೆಳಗ್ಗೆ ಬೇಗ ಎದ್ದು ಮನೆಯಿಂದ ಹೊರ ಹೊರಟವರಿಗೆ ದಟ್ಟ ಮಂಜು ಕವಿದ ವಾತಾವರಣ ರಸ್ತೆಯನ್ನು ಮಬ್ಬಾಗಿಸಿತ್ತು..
ಅದೇ ವಾತಾವರಣ ಸಾಕಷ್ಟು ಮಂದಿಯನ್ನು ಫುಳುಕಿತಗೊಳಿಸುವ ಜತೆಗೆ ಕೊರೆವ ಚಳಿಗೆ ಮೈ ನಡುಕವನ್ನುಂಟು ಮಾಡಿತ್ತು.





ವಾಯು ವಿಹಾರ, ವಾಕಿಂಗ್, ಜಾಗಿಂಗ್ ಕ್ರೇಜ್. ಇಂಥ ಹವ್ಯಾಸ ಇದ್ದವರಿಗೆ ಬೆಳಗ್ಗೆ 6 ರಿಂದಲೇ ಮಂಜು ಇತ್ತಾದರೂ , 7ರ ಸುಮಾರಿಗೆ ದಟ್ಟವಾಗ ತೊಡಗಿತು. 7.20 ಆಗುವಷ್ಟರಲ್ಲಿ ಸುತ್ತಲಿನ ಎರಡು ಮೀಟರ್ ದೂರದ ವಾತಾವರಣ ಮಬ್ಬು. ಏನೂ ಕಾಣದಂತೆ ಮಂಜು ಆವರಿಸಿತ್ತು.

ಸುಮಾರು ಒಂದೂವರೆ ತಾಸು ಇದೇ ವಾತಾವರಣ ಮುಂದುವರಿಯಿತು. ಬೆಳಗ್ಗೆ ವಾಕಿಂಗ್, ಜಾಗಿಂಗ್ ಹೋಗಿದ್ದ ಮಂದಿ ದಟ್ಟ ಮಂಜು ಕವಿದ ವಾತಾವರಣದ ಮಜಾ ಅನುಭವಿಸಿದರು.
ಮಂಜು ಆವರಿಸಿದ ದೃಶ್ಯ ಮಲೆನಾಡಿನ ವಾತವಾರ ಕಂಡಂತೆ ಆದರೆ ಹೆದ್ದಾರಿಯಲ್ಲಿ ಸಂಚಿರುವ ವಸಹನಗಳು ಲೈಟ್ ಹಾಕಿಕೊಂಡು ಸಂಚರಿಸುವ ದೃಶ್ಯ ಕಂಡು ಬಂತು.
ಮಂಜುಕವಿದ ವಾತಾವರಣ ಹಾಗೂ ಶೀತವಾವರಣದಿಂದ ವೃದ್ದರ.ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ನೆಗಡಿ.ಕೆಮ್ಮುನಿಂದ ಬಳಲುವಂತಾಗಿದೆ.
