ಬೆಂಗಳೂರುದಲ್ಲಿ ಮೂರನೇ ವರ್ಷದ ವಿಶ್ವಕರ್ಮ ವಧು-ವರರ ಮಹಾ ಸಮಾವೇಶ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮ ಸಮುದಾಯದ ವತಿಯಿಂದ ನಡೆಯಲಿರುವ ಮೂರನೇ ವರ್ಷದ ವಧು-ವರರ ಮಹಾ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷೆ ಸರಸ್ವತಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಧು-ವರರಿಗಾಗಿ ಪೋಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೆ.ಪಿ. ನಂಜುಂಡಿ ಅವರ ಸಾರಥ್ಯದಲ್ಲಿ ಏಪ್ರಿಲ್ 24, 25 ಮತ್ತು 26ರಂದು ಬೆಂಗಳೂರು ನಗರದ ಶಿವಾನಂದ ಸರ್ಕಲ್‌ನ ಫಿಲ್ಮ್ ಚೇಂಬರ್‌ನಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಈ ಸಮಾವೇಶ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ವಧು-ವರರು ಹಾಗೂ ಮದುವೆ ವಿಚ್ಛೇದಿತರೂ ಭಾಗವಹಿಸಲು ಅವಕಾಶವಿದ್ದು, ಸಮುದಾಯದ ಗಣ್ಯರು, ಗುರುಗಳು ಹಾಗೂ ಶಾಸ್ತ್ರಜ್ಞರು ಉಪಸ್ಥಿತರಿರಲಿದ್ದಾರೆ. ಮೊದಲ ವರ್ಷದ ಸಮಾವೇಶದಲ್ಲಿ 100 ಜೋಡಿಗಳು, ಎರಡನೇ ವರ್ಷದಲ್ಲಿ 350 ಜೋಡಿಗಳು ಭಾಗವಹಿಸಿದ್ದು, ಈ ವರ್ಷ ಸುಮಾರು 500 ಜೋಡಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಸಮಾವೇಶಕ್ಕೆ ಆಗಮಿಸುವವರಿಗೆ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರ ಭದ್ರತೆ ದೃಷ್ಟಿಯಿಂದ ವಸತಿ ವ್ಯವಸ್ಥೆಯನ್ನು ಕೈಬಿಡಲಾಗಿದೆ.
ಬ್ರೋಕರ್‌ಗಳಿಗೆ ಹೆಚ್ಚಿನ ಹಣ ನೀಡಿ ಸಂಕಷ್ಟ ಅನುಭವಿಸುತ್ತಿರುವ ಪೋಷಕರಿಗೆ ಈ ಸಮಾವೇಶ ಸಹಾಯಕವಾಗಲಿದೆ. ಕೆ.ಪಿ. ನಂಜುಂಡಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದರಿಂದ, ವಿಶ್ವಕರ್ಮ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಚಳ್ಳಕೆರೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರಪ್ಪ ಚಾರ್, ಸಿಇ ಪ್ರಸನ್ನ ಕುಮಾರ್, ಸತ್ಯನಾರಾಯಣ ಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.