ಚಳ್ಳಕೆರೆ: ನಗರದ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರಕಾರಿ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93.30ರಷ್ಟು ಫಲಿತಾಂಶ ಗಳಿಸಿ ಗಮನಾರ್ಹ ಸಾಧನೆ ಮಾಡಿದೆ. ಒಟ್ಟು 269 ವಿದ್ಯಾರ್ಥಿನಿಯರಲ್ಲಿ 251 ಮಂದಿ ಉತ್ತೀರ್ಣರಾಗಿದ್ದಾರೆ.


ತಾಲೂಕಿನ ಏಕೈಕ ಬಾಲಕಿಯರ ಸರಕಾರಿ ಪ್ರೌಢಶಾಲೆಯಾದ ಈ ಸಂಸ್ಥೆ, ಈ ಬಾರಿ ಅತ್ಯುತ್ತಮ ಶ್ರೇಣಿಯಲ್ಲಿ 16, ಪ್ರಥಮ ಶ್ರೇಣಿಯಲ್ಲಿ 123, ದ್ವಿತೀಯ ಶ್ರೇಣಿಯಲ್ಲಿ 63 ಹಾಗೂ 51 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವಿಷಯವಾರು ಫಲಿತಾಂಶದಲ್ಲಿ ಕನ್ನಡದಲ್ಲಿ 265, ಇಂಗ್ಲಿಷ್‌ನಲ್ಲಿ 264, ಹಿಂದಿಯಲ್ಲಿ 267, ಗಣಿತದಲ್ಲಿ 265, ವಿಜ್ಞಾನದಲ್ಲಿ 258 ಹಾಗೂ ಸಮಾಜ ವಿಜ್ಞಾನದಲ್ಲಿ 259 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ವೈಯಕ್ತಿಕ ಸಾಧನೆಯಲ್ಲಿ ಟಿ. ಅಶ್ವಿನಿ 592 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಟಿ. ಬಿಂದು 587 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ಕೆ.ವಿ. ಶ್ರೀಲೇಖ 582 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.