April 22, 2026
IMG-20260422-WA0297.jpg

ಬೆಂಗಳೂರು, ಏಪ್ರಿಲ್ 22:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ತೆಂಗಿನ ನಾರಿನ ಮ್ಯಾಟ್‌ಗಳು ಮತ್ತು ಇತರೆ ಉತ್ಪನ್ನಗಳನ್ನು ದೆಹಲಿಗೆ ಸಾಗಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ನಟರಾಜ್ ಜಾನಕಿರಾಮ್, ಮುಖಂಡರಾದ ರವಿ ಬೋಸರಾಜು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಿಗಮವು ಗ್ರಾಮೀಣ ಮಹಿಳೆಯರಿಂದ ತಯಾರಿಸಲ್ಪಟ್ಟ ಸುಮಾರು 8000 ಡಚ್ ಮ್ಯಾಟ್‌ಗಳನ್ನು ದೆಹಲಿಗೆ ಸರಬರಾಜು ಮಾಡಲು ಸಿದ್ಧಪಡಿಸಿದೆ. ಈ ಹಿನ್ನೆಲೆ, 22.04.2026ರಂದು ಬೆಳಿಗ್ಗೆ 9 ಗಂಟೆಗೆ ನಡೆದ ಈ “Flag Off Ceremony” ಮೂಲಕ ಸರಬರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಡಚ್ ಮ್ಯಾಟ್ ವಿಶೇಷತೆ ಏನು?
“ಡಚ್ ಮ್ಯಾಟ್” ಎಂದರೆ ತೆಂಗಿನಕಾಯಿ ತೊಗಟೆಯಿಂದ ದೊರೆಯುವ ಕಾಯರ್ (Coir) ನಾರುಗಳಿಂದ ತಯಾರಿಸಲ್ಪಡುವ ಮ್ಯಾಟ್. 18ನೇ ಶತಮಾನದಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ತಯಾರಿಸಲ್ಪಟ್ಟ ಈ ಮ್ಯಾಟ್‌ಗಳನ್ನು ಡಚ್ ವ್ಯಾಪಾರಿಗಳು ಯುರೋಪ್‌ಗೆ ಸಾಗಾಟ ಮಾಡುತ್ತಿದ್ದ ಹಿನ್ನೆಲೆ, “ಡಚ್ ಮ್ಯಾಟ್” ಎಂಬ ಹೆಸರು ಬಂದಿದೆ.
ತಯಾರಿಕಾ ವಿಧಾನ (ಸಂಕ್ಷಿಪ್ತವಾಗಿ):
ತೆಂಗಿನ ತೊಗಟೆ ಸಂಗ್ರಹ
ಬಸ್ಟರ್ ಯಂತ್ರದಲ್ಲಿ ಮೃದುಗೊಳಿಸುವುದು
7 ದಿನಗಳವರೆಗೆ ನೀರಿನಲ್ಲಿ ನೆನೆಸುವುದು
ನಾರು ಬೇರ್ಪಡಿಸಿ 2 ply ಯಂತ್ರದಲ್ಲಿ ಹುರಿ ತಯಾರಿ
ಬಣ್ಣ ಹಚ್ಚಿ, ಹಸ್ತಚಾಲಿತ ಫ್ರೇಮ್‌ನಲ್ಲಿ ಹೆಣೆಯುವುದು
ಪ್ರೆಸಿಂಗ್ ಮೂಲಕ ಮ್ಯಾಟ್ ಸಿದ್ಧಪಡಿಸುವುದು
14×24 ಇಂಚಿನ ಡಚ್ ಮ್ಯಾಟ್ ಸುಮಾರು 900 ಗ್ರಾಂ ತೂಕ ಹೊಂದಿದ್ದು, ಕಾರಿಡಾರ್ ಮ್ಯಾಟ್ ಸುಮಾರು 1060 ಗ್ರಾಂ ತೂಕ ಹೊಂದಿರುತ್ತದೆ.
ಉತ್ಪನ್ನಗಳ ವಿಶೇಷತೆಗಳು:
ಬಲಿಷ್ಠ ಮತ್ತು ದೀರ್ಘಕಾಲಿಕ
ಪರಿಸರ ಸ್ನೇಹಿ (Eco-friendly)
ಅಲಂಕಾರಿಕ ಮತ್ತು ಉಪಯುಕ್ತ
ದೇಶಾದ್ಯಂತ ಹಾಗೂ ಹಿಮಾಲಯ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ
ಉದ್ಯೋಗ ಮತ್ತು ಮಾರುಕಟ್ಟೆ ವಿಸ್ತರಣೆ:
ನಿಗಮದ 35 ಉತ್ಪಾದನಾ ಘಟಕಗಳ ಮೂಲಕ ಸುಮಾರು 700 ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗಿದೆ.
ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು:
‘coirkarnataka.in’ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ
‘coirempower.com’ ಇ-ಕಾಮರ್ಸ್ ವೇದಿಕೆ ಆರಂಭಿಸಲಾಗಿದೆ
“ಮಾಲ್ಗುಡಿ ಅಮೃತ್ ಚಹಾ” ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ
ವಿವಿಧ ರಾಜ್ಯಗಳಲ್ಲಿ ಸ್ಟಾಕಿಸ್ಟ್ ಮತ್ತು ವಿತರಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ
ಹಸಿರು ಉತ್ಪನ್ನಗಳ ಪ್ರೋತ್ಸಾಹಕ್ಕೆ ಕರೆ:
ಡಚ್ ಮ್ಯಾಟ್, ಕಾರಿಡಾರ್ ಮ್ಯಾಟ್, ರೋಲಿಂಗ್ ಮ್ಯಾಟ್, ಜಿಯೋ ಟೆಕ್ಸ್ಟೈಲ್ಸ್, ಕಾಯರ್ ಹಾಸಿಗೆ ಮತ್ತು ದಿಂಬುಗಳು ಪರಿಸರ ಸ್ನೇಹಿ ಉತ್ಪನ್ನಗಳಾಗಿದ್ದು, ಇವುಗಳನ್ನು ಖರೀದಿಸುವ ಮೂಲಕ ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಆರ್ಥಿಕತೆಗೆ ಬೆಂಬಲ ನೀಡಲು ಸಾರ್ವಜನಿಕರು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.
ವಂದನೆಗಳೊಂದಿಗೆ
ನಟರಾಜ್
📞 9880167000

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading