ಚಳ್ಳಕೆರೆ:
ಚರ್ಮಗಂಟು ರೋಗವು ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಂಡು ಬಳಿಕ ಚರ್ಮದ ಮೇಲೆ ಗಂಟುಗಳು ಉಂಟಾಗುತ್ತವೆ ಎಂದು ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ. ಶ್ರೀನಿವಾಸ್ ಬಾಬು ಹೇಳಿದರು.
ಚರ್ಮಗಂಟು ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳ ಮೂಲಕ ಹರಡುವ ಸಾಧ್ಯತೆ ಇದ್ದು, ಸಾಮಾನ್ಯವಾಗಿ ಶೇಕಡಾ 2ರಿಂದ 5ರಷ್ಟು ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪುವ ಸಂಭವವಿದೆ ಎಂದು ಅವರು ತಿಳಿಸಿದರು.













ಮುನ್ನೆಚ್ಚರಿಕಾ ಕ್ರಮವಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜಾನುವಾರುಗಳಿಗೆ ಚರ್ಮಗಂಟು ರೋಗ ವಿರುದ್ಧ ಉಚಿತ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರೂ ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು ಎಂದು ಅವರು ಮನವಿ ಮಾಡಿದರು.
ತಾಲೂಕಿನ ನನ್ನಿವಾಳ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಂಗಾರದೇವರಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ಲಸಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವೆಂಕಟೇಶ್ (ಪಿ.ಎನ್.ಎಸ್.ಎಸ್ ಅಧಿಕಾರಿ), ಡಾ. ಕುಮಾರ್ (ಸಹಾಯಕ ಶಿಬಿರಾಧಿಕಾರಿ), ಮಂಜುನಾಥ್, ಪಿ.ಸಿ ಸಹಾಯಕ ದೊಡ್ಡಬಯ್ಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.