ನಾಯಕನಹಟ್ಟಿ :
ಚಳ್ಳಕೆರೆ ತಾಲ್ಲೂಕಿನ ನಾಯಕಹಟ್ಟಿ ಸಮೀಪರುವ ಡಿ ಆರ್ ಡಿ ಓ ಹತ್ತಿರ ಇರುವ ಕೆನರಾ ಬ್ಯಾಂಕ್ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಕೆನರಾ ವಿದ್ಯಾ ಜ್ಯೋತಿ ಸ್ಕಾಲರ್ಶಿಪ್ ವನ್ನು ನಾಯಕನಹಟ್ಟಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಸಿ ಮತ್ತು ಎಸ್ಟಿ ವರ್ಗದ ಐದನೇ ತರಗತಿ, ಆರನೇ ತರಗತಿ, ಏಳನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿ, ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿನಿಯರಿಗೆ ಕೆನರಾ ಬ್ಯಾಂಕ್ ವತಿಯಿಂದ ಒಬ್ಬ ವಿಧ್ಯಾರ್ಥಿನಿಗೆ 3000 ರೂಗಳಂತೆ ಮೂರು ಪ್ರತಿಭಾಂವತ ವಿಧ್ಯಾರ್ಥಿನಿಯರಿಗೆ ಹಾಗೂ ಶ್ರೀ ವಿಜಯ ಕನ್ನಡ ಪ್ರೌಢಶಾಲೆ ಮನಮೈನಹಟ್ಟಿ ಎಸ್ಸಿ ಮತ್ತು ಎಸ್ಟಿ ಹೆಣ್ಣು ಮಕ್ಕಳಿಗೆ ತಲಾ ಒಬ್ಬರಂತೆ ಮೂರು ವಿಧ್ಯಾರ್ಥಿನಿಯರಿಗೆ ತಲಾ 5000 ರೂಗಳಂತೆ 8ನೇ, 9ನೇ, 10ನೇ ತರಗತಿಯ ವಿಧ್ಯಾರ್ಥಿನಿಯರಿಗೆ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಾಲೆಯ ಆವರಣದಲ್ಲಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಚೆಕ್ ವಿತರಣೆ ಮಾಡಲಾಯಿತ್ತು.
ಖುದಾಪುರ ಕೆನರಾ ಬ್ಯಾಂಕ್ ಶಾಖೆ ವ್ಯವಸ್ಥಾಪಕರಾದ ಟಿ ಪ್ರಹ್ಲಾದ, ಸಿಬ್ಬಂದಿಯಾದ ಟಿ ರಾಜಶೇಖರ್ ,ಜೆ ರಾಜೇಂದ್ರ ಪ್ರಸಾದ್ , ನಾಗರಾಜ್ ಎನ್ ಟಿ, ಓಬಳೇಶ್ ಬಿ ಶಾಲಾ ಮುಖೋಪಾಧ್ಯಾಯರು, ಸಹ ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಇದ್ದರು.

About The Author
Discover more from JANADHWANI NEWS
Subscribe to get the latest posts sent to your email.