August 15, 2026
IMG-20260815-WA0577

ನಾಯಕನಹಟ್ಟಿ:- ಭಾರತ ದೇಶಕ್ಕೆ ಅನೇಕ ಮಹನೀಯರ ತ್ಯಾಗ ಬಲಿದಾನಗಳ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಟಿ ರಂಗಪ್ಪ ತಿಳಿಸಿದರು.

ಶನಿವಾರ ಹೋಬಳಿಯ ಗೌಡಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವತಂತ್ರೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು ಭಾರತೀಯರಾದ ನಾವು ಇಂದು 80ನೇ ಸ್ವಾತಂತ್ರೋತ್ಸವ ಆಚರಣೆ ಮಾಡುತ್ತಿದ್ದೇವೆ ಈ ದಿನವನ್ನು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ 1947ರಲ್ಲಿ ದೇಶ ಬಿಡುಗಡೆ ಹೊಂದಿದ ವಿಜಯ ದಿನವಾಗಿ ಗುರುತಿಸಲು ಆಚರಣೆ ಮಾಡಲಾಗುತ್ತದೆ ಪ್ರತಿ ವರ್ಷ ಆಗಸ್ಟ್ 15ರಂದು ದೇಶಭಕ್ತಿಯ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನಾಯಕರ ಭಾಷಣ ದೇಶದ ಎಲ್ಲೆಡೆ ಇರುತ್ತದೆ ಹಾಗೆ ನಾವು ಇಂದು ನಮ್ಮ ಗ್ರಾಮದಲ್ಲಿ ವಿಜೃಂಭಣೆಯಿಂದ 80ನೇ ಸ್ವಾತಂತ್ರ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ ಎಂದರು.

ಪಿಡಿಒ ಈಶ್ವರಪ್ಪ ಮಾತನಾಡಿದರು. ಸ್ವಾತಂತ್ರ ಹೋರಾಟಗಾರರ ತ್ಯಾಗವನ್ನು ನೆನಪು ಮಾಡಿಕೊಂಡು ಅವರಿಗೆ ಸ್ಮರಿಸಬೇಕಾಗುತ್ತದೆ ಎಂದರು.

ಇದೆ ವೇಳೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಮಂಜಮ್ಮ, ಮಾತನಾಡಿದರು ಗ್ರಾಮದ ಪ್ರತಿಯೊಬ್ಬ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆ ಉಳಿವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಹುಮಾನವನ್ನು ಬಸವರಾಜ್ ಗುಪ್ತ ಶ್ರೀಮತಿ ಲಕ್ಷ್ಮಿ, ನೀಡಿದರು.

ಇದೇ ಸಂದರ್ಭದಲ್ಲಿ ಎಸ್ ಡಿಎಂಸಿ ಉಪಾಧ್ಯಕ್ಷೆ. ಗೀತಮ್ಮ, ಎಲ್ಲಾ ಸದಸ್ಯರು ಶಾಲೆಯ ಶಿಕ್ಷಕರಾದ ಪ್ರೇಮಕ್ಕ, ಈ ನಾಗರಾಜ್, ಎಚ್ಎ ಸುನಿತಾ, ಎಚ್ ಹನುಮಂತಪ್ಪ, ಶಿಲ್ಪ, ನಾಗವೇಣಿ, ಅನಿತಾ, ಸೇರಿದಂತೆ ಸಮಸ್ತ ಗೌಡಗೆರೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading