ನಾಯಕನಹಟ್ಟಿ:- ರಸ್ತೆ ಅಪಘಾತಗಳು ಸಂಭವಿಸಿದಾಗ ವಾಹನಕ್ಕೆ ಆಗುವ ಹಾನಿಗಿಂತಲೂ ಮನುಷ್ಯನ ಜೀವಕ್ಕೆ ಆಗುವ ಹಾನಿ ಅತ್ಯಂತ ದೊಡ್ಡದು ಅದರಲ್ಲೂ ದ್ವಿಚಕ್ರವಾಹನ ಸವಾರರ ಪಾಲಿಗೆ ಹೆಲ್ಮೆಟ್ ಜೀವ ರಕ್ಷಕ ಕವಚದಂತಿದೆ ಹೀಗಾಗಿ ಪ್ರತಿಯೊಬ್ಬ ಸವಾಲು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿ ಪ್ರಯಾಣಿಸಬೇಕು ಎಂದು ನಾಯಕನಹಟ್ಟಿ- ಪೊಲೀಸ್ ಠಾಣೆ ಪಿಎಸ್ಐ ಜಿ. ಪಾಂಡುರಂಗಪ್ಪ ಕರೆ ನೀಡಿದರು.





ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸಿ ಮಾತನಾಡಿದ ಅವರು ಹೆಲ್ಮೆಟ್ ಪೊಲೀಸರ ಭಯದಿಂದಲೂ ದಂಡ ತಪ್ಪಿಸಿಕೊಳ್ಳುವುದಕ್ಕಾಗಿಯೂ ಧರಿಸುವ ವಸ್ತುವಲ್ಲ ಅದು ನಮ್ಮ ಜೀವವನ್ನು ಕಾಪಾಡಿಕೊಳ್ಳುವ ಸುರಕ್ಷಿತ ಕವಚ ನಮ್ಮನ್ನು ನಂಬಿಕೊಂಡಿರುವ ಕುಟುಂಬದವರಿಗಾಗಿ ಪ್ರತಿಯೊಬ್ಬರು ಹೆಲ್ಮೆಟ್ ಧರಿಸುವುದನ್ನು ತಮ್ಮ ಜವಾಬ್ದಾರಿ ಯಾಗಿದೆ ಎಂದರು.
ಇದೆ ವೇಳೆಯಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಜ್ಜಯ್ಯ, ಲಕ್ಷ್ಮಿಪತಿ, ರಾಜು, ಪವನ್, ಇದ್ದರು
About The Author
Discover more from JANADHWANI NEWS
Subscribe to get the latest posts sent to your email.