August 12, 2026
IMG-20260812-WA0235


ಚಳ್ಳಕೆರೆ: ನಗರದ ಜಗಳೂರು ಅಜ್ಜ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಸರ್ವ ಸದಸ್ಯರ ಸಭೆಯನ್ನು ನಡೆಸಲಾಯಿತು.
ಸಭೆಯ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆಯಲಿರುವ ಮಧ್ಯ ಕರ್ನಾಟಕದ ಪ್ರೊ ಇಮೇಜ್ ಇಂಟರ್‌ನ್ಯಾಷನಲ್ ಫೋಟೋ ಎಕ್ಸಿಬಿಷನ್ ಕುರಿತು ಪ್ರಚಾರ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಛಾಯಾಚಿತ್ರ ಕ್ಷೇತ್ರದ ಬೆಳವಣಿಗೆ, ಛಾಯಾಗ್ರಾಹಕರ ಒಗ್ಗಟ್ಟು ಹಾಗೂ ವೃತ್ತಿಪರ ಚಟುವಟಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ನಾಗಣ್ಣ, ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಪ್ರಸನ್ನ, ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ತಿರುಮಲ ಕುಮಾರ್, ನಿರ್ದೇಶಕರಾದ ಅಶೋಕ್, ಬಾನು, ವೀರೇಶ್, ಕೆ. ಶ್ರೀನಿವಾಸಲು, ರಘು, ಬೆಂಗಳೂರು ಮಂಜು, ದಿವಾಕರ, ನಾಯಕನಹಟ್ಟಿ ಭಾಗದ ನಿರ್ದೇಶಕರಾದ ಮೃತ್ಯುಂಜಯ, ತಿಪ್ಪೇಶ್, ತಳಕ್ ವೀರೇಶ್, ಮಹೇಶ್ ಸೇರಿದಂತೆ ಹಿರಿಯ ಛಾಯಾಗ್ರಾಹಕರಾದ ನಾಗರಾಜ್ ಗೌಡ, ಉಮಾಶಂಕರ್, ಮಾಡೆಲ್ ಸ್ಟುಡಿಯೋದ ತಿಪ್ಪೇಸ್ವಾಮಿ, ಜಿಲ್ಲಾ ಛಾಯಾಗ್ರಾಹಕರ ಸಂಘದ ನಿರ್ದೇಶಕರಾದ ಅಪ್ಪಿ ಅಜಯ್, ಸುರೇಶ್, ಲಕ್ಷ್ಮಿ ಸ್ಟುಡಿಯೋದ ಪ್ರತಿನಿಧಿಗಳು ಹಾಗೂ ತಾಲೂಕು ಸಂಘದ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading