ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಭದ್ರಾ ಯೋಜನೆಯನ್ನ ಕಾರ್ಯರೂಪಕ್ಕೆ ಅಂದು ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪನವರು.ಪ್ರಥಮ ಹಂತದಲ್ಲಿ ೮ ಸಾವಿರ ಕೋಟಿ ಹಣವನ್ನ ಬಿಡುಗಡೆ ಮಾಡಿದ್ದರು ಅಲ್ಲಿಂದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಾಲನೆ ದೋರೆಯಿತು ಹೊಸದುರ್ಗ ತಾಲೂಕಿನಲ್ಲಿ ಕಾಮಗಾರಿ ಹಂತಿಮ ಹಂತದಲ್ಲಿದ್ದು ಹೊಸದುರ್ಗ ತಾಲೂಕಿಗೂ ಕೂಡ ಅತೀ ಶೀಘ್ರವಾಗಿ ಭದ್ರೆ ಹರಿದು ತಾಲೂಕಿನ ಕೆರೆಗಳು ಆದಷ್ಟು ಬೇಗ ತುಂಬಿ ಹರಿಯಲಿ ಎಂದು ಹಿರಿಯ ಶಾಸಕ ಇಲ್ಕಲ್‌ವಿಜಯಕುಮಾರ್ ಆಶಯವನ್ನ ವ್ಯಕ್ತಪಡಿಸಿದ್ದಾರೆ
ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಯೋಜನೆಯ ಜಾರಿಗೆ ಹೋರಾಡಿದಂತವರು ಕೋದಂಡರಾಮಯ್ಯನವರು, ಕೋದಂಡರಾಮಯ್ಯನವರು ನಮ್ಮ ಚಿತ್ರದುರ್ಗ ಜಿಲ್ಲೆಗೆ ಸಾಕಷ್ಟು ಕೆಲಸಗಳನ್ನ ಮಾಡಿಸಿದ್ದಾರೆ ಆದರೂ ಜನ ಇಂದು ಅವರನ್ನ ಮರೆತಿದ್ದಾರೆ ಯಡಿಯೂರಪ್ಪನವರು ಬಿಡುಗಡೆ ಮಾಡಿದಂತಹ ಹಣ ತಾಲೂಕಿನ ನಿಷ್ಠಾವಂತ ಅಧಿಕಾರಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್ ಚೆಲುವರಾಜ್ ಇವುಗಳ ಶ್ರಮದಿಂದ ಬಹು ಬೇಗ ಕಾಮಗಾರಿ ನಡೆಯಿತು.
ಆದರೆ ನಂತರ ಬಂದAತಹ ಸರ್ಕಾರಗಳು ಸಿದ್ದರಾಮಯ್ಯನವರ ಮತ್ತು ಬಸವರಾಜ್‌ಬೊಮ್ಮಾಯಿ ಅವರ ಸರ್ಕಾರ ಇವರೂ ಕೂಡ ಹಣವನ್ನ ಬಿಡುಗಡೆ ಮಾಡುತ್ತಾ ಬಂದರು.ಹಾಗೂ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪನವರೂ ಕೂಡ ಇದಕ್ಕೆ ಸಂಪೂರ್ಣ ಶ್ರಮವಹಿಸಿ ಕೈಜೋಡಿಸಿದ ಪರಿಣಾಮ ಕಾಮಗಾರಿ ಬಹಳಷ್ಟು ಬೇಗ ಆಗಿದೆ, ಪಕ್ಕದ ಬಳ್ಳಾರಿ ಜಿಲ್ಲೆಯಲ್ಲಿ ಭದ್ರಾ ನೀರು ಹೆಚ್ಚು ಹೆಚ್ಚು ಹರಿಯುತ್ತಿದೆ,
ಬಿ.ಎಸ್.ಯಡಿಯೂರಪ್ಪ, ಕೋದಂಡರಾಮಯ್ಯ, ಸಿದ್ದರಾಮಯ್ಯ, ಬಸವರಾಜ್‌ಬೊಮ್ಮಾಯಿ, ಚೆಲುವರಾಜ್ ಇಂತಹ ಮಹನೀಯರ ಶ್ರಮ ಹಾಗೂ ಕೋಡುಗೆಯನ್ನ ನಾವು ಎಂದಿಗೂ ಸಹಾ ಮರೆಯುವಂತಿಲ್ಲ ಇವರುಗಳು ಅಭಿನಂದನಾರ್ಹರು, ಇವರುಗಳನ್ನ ಸನ್ಮಾನಿಸುವ ಕರ್ತವ್ಯ ನಮ್ಮದಾಗಿದೆ ಎಂದ ಅವರು ಇವರುಗಳು ಶ್ರಮ ವಹಿಸದಿದ್ದರೆ ಇಷ್ಟೋಂದು ಪ್ರಮಾಣದಲ್ಲಿ ಕೆಲಸ ಹಾಗುತ್ತಿರಲಿಲ್ಲ ಎಂದರು.
ಭದ್ರಾ ಮೇಲ್ದಂಡೆ ವಿಷಯದಲ್ಲಿ ಹೋರಾಟ ನಡೆಸುವ ಮೂಲಕ ಕೈ ಜೋಡಿಸಿದಂತಹ ಮುರುಘಾರಾಜೇಂದ್ರ ಒಡೆಯರ್, ನೀರಾವರಿ ಹೋರಾಟ ಸಮಿತಿಯ ಜಯಣ್ಣ,ಚಿಕ್ಕಪ್ಪನಹಳ್ಳಿಷಣ್ಮುಕಪ್ಪ,ಇವರುಗಳಿಗೆ ಗೌರವವನ್ನ ಸಲ್ಲಿಸಲೆ ಬೇಕು ಎಂದ ಅವರು ಹೊಸದುರ್ಗ ತಾಲೂಕಿಗೂ ಕೂಡ ಅತೀ ಶೀಘ್ರವಾಗಿ ಭದ್ರೆ ಹರಿದು ತಾಲೂಕಿನ ಕೆರೆಗಳು ಆದಷ್ಟು ಬೇಗ ತುಂಬಿ ಹರಿಯಲಿ ಎಂಬ ಆಶಯವನ್ನ ವ್ಯಕ್ತಪಡಿಸಿದರು.


About The Author
Discover more from JANADHWANI NEWS
Subscribe to get the latest posts sent to your email.