August 10, 2026
IMG-20260810-WA0201


ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಪಟ್ಟಣದ ಗೌಸಿಯಾ ಶಾದಿ ಮಹಲ್ ನಲ್ಲಿ ಸೋಮವಾರ ಎಸ್.ಐ.ಆರ್ ಪ್ರಕ್ರಿಯೆಯ ಮುಂದಿನ ಸವಾಲುಗಳು, ಕಾನೂನಾತ್ಮಕ ತೊಡಕುಗಳು ಹಾಗೂ ಸಾಧ್ಯ ಪರಿಹಾರಗಳ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಎಸ್.ಐ,ಆರ್ ಜಾರಿ ಚುನಾವಣಾ ಆಯೋಗದ ನಿರ್ಧಾರವಲ್ಲ ಎಂಬ ಆರ್.ಟಿ.ಐ ಉತ್ತರವು ಪ್ರಜಾಪ್ರಭುತ್ವದ ಮುಂದೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ, ಇಂತಹ ಮಹತ್ವದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದರೆ, ಅದರ ನಿರ್ಧಾರ ಯಾರದ್ದು? ಯಾವ ಕಾನೂನು ಮತ್ತು ದಾಖಲೆಗಳ ಆಧಾರದ ಮೇಲೆ ಜಾರಿಗೆ ತರಲಾಗಿದೆ? ಎಂಬ ಪ್ರಶ್ನೆಗಳು ಇನ್ನೂ ಉತ್ತರಿಸದೇ ಉಳಿದಿವೆ. ಮತದಾರರ ಪಟ್ಟಿ ಎಂಬುದು ಕೋಟ್ಯಂತರ ನಾಗರಿಕರ ಮೂಲಭೂತ ಹಕ್ಕಿಗೆ ಸಂಬAಧಿಸಿದ ಮಹತ್ವದ ದಾಖಲೆ ಆಗಿದ್ದು, ಅದರಲ್ಲಿನ ಯಾವುದೇ ಬದಲಾವಣೆ ಪಾರದರ್ಶಕವಾಗಿ ಹಾಗೂ ಕಾನೂನಾತ್ಮಕವಾಗಿ ನಡೆಯಬೇಕು. ಆದರೆ ಪ್ರಸ್ತುತ SIಖ ಪ್ರಕ್ರಿಯೆಯಲ್ಲಿ ದಾಖಲೆಗಳ ಕೊರತೆ, ನಿರ್ಧಾರಗಳ ಸ್ಪಷ್ಟತೆಯ ಅಭಾವ ಮತ್ತು ವೈರುಧ್ಯಗಳು ಕಂಡು ಬರುತ್ತಿವೆ ಎಂದು ಅವರು ಹೇಳಿದರು.
ಇದೇ ವೇಳೆ ರಾಜ್ಯ ಮಟ್ಟದಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಡಿಲೀಟ್ ಆಗುವ ಅಪಾಯವಿದೆ ಎಂದು ಎಚ್ಚರಿಸಿ ಅವರು ಸುಮಾರು ೧.೧ ಕೋಟಿ ಮತಗಳು ಅಪಾಯದಲ್ಲಿದ್ದು, ಲಕ್ಷಾಂತರ ಮತಗಳು ಮ್ಯಾಪಿಂಗ್ ಆಗದೆ ಉಳಿದಿವೆ ಎಂಬ ಅಂಕಿ-ಅAಶಗಳು ಗಂಭೀರ ಪರಿಸ್ಥಿತಿಯನ್ನು ಸೂಚಿಸುತ್ತವೆ ಎಂದು ಹೇಳಿದರು.
ಹೊಸದುರ್ಗ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಎನ್. ಜಬೀಉಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯದರ್ಶಿ ಆರಿಫ್, ತಾಲ್ಲೂಕು ಉಪಾಧ್ಯಕ್ಷ ಚಾಂದ್‌ಬಾಷಾ, ಇಸ್ಮಾಯಿಲ್ ಜಬೀಉಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading