August 7, 2026
IMG-20260807-WA0271

ನಾಯಕನಹಟ್ಟಿ- ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಆಗಸ್ಟ್ 15ರವರೆಗೆ ಮಾತ್ರ ದ್ವಿಚಕ್ರ ವಾಹನ ಬೈಕ್ ಸವಾರರಿಗೆ ಹೆಲ್ಮೆಟ್ ಖರೀದಿಗೆ ಅವಕಾಶ ಆಗಸ್ಟ್ 15ರ ನಂತರ ದ್ವಿಚಕ್ರವಾಹನ ಹೆಲ್ಮೆಟ್ ಇಲ್ಲವೆಂದರೆ ದಂಡ ಕಟ್ಟಬೇಕಾಗುತ್ತದೆ ಎಂದು ಪಿಎಸ್ಐ ಜಿ ಪಾಂಡುರಂಗಪ್ಪ ದ್ವಿಚಕ್ರವಾಹನ ಸವಾರರಿಗೆ ಸಲಹೆ ನೀಡಿದರು.

ಶುಕ್ರವಾರ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಹೆಲ್ಮೆಟ್ ಇಲ್ಲದೆ ಸಂಚಾರ ಮಾಡುವ ವಾಹನ ಬೈಕ್ ಸವಾರರಿಗೆ ಹೆಲ್ಮೆಟ್ ಖರೀದಿಸಲು ಜಾಗೃತಿ ಮೂಡಿಸಿ ಮಾತನಾಡಿದ ಅವರು ನಿಮ್ಮ ಜೀವನ ಮತ್ತು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆ ಇರುತ್ತದೆ ಅದೇ ರೀತಿ ಮಧ್ಯಪಾನ ಮಾಡಿ ವಾಹನ ಚಲಿಸುವುದು ಅಪರಾಧ ಆದ್ದರಿಂದ ಯಾರೇ ಬೈಕು ಚಲಾಯಿಸಿದರು ಕೂಡ ಹೆಲ್ಮೆಟ್ ಅನ್ನು ಕಡ್ಡಾಯವಾಗಿ ಧರಿಸಬೇಕು ಸಂಚಾರಿ ನಿಯಮ ತಪ್ಪದೇ ಪಾಲಿಸಬೇಕು ಎಂದರು.

ಪ್ರೊಫೆಸನರಿ ಪಿಎಸ್ಐ ಗುರುರಾಜ್, ಎ ಎಸ್ ಐ ರವಿಕುಮಾರ್, ಅಜ್ಜಯ್ಯ, ಭಾಷಾ, ರಾಮಾಂಜನಿ, ಲಕ್ಷ್ಮಿಪತಿ, ಖಾದರ್ ಭಾಷಾ, ಪವನ್ ,ಶ್ರೀಹರಿ, ರಾಜು, ರಾಘವೇಂದ್ರ, ವೀರೇಶ್, ಶಿವರಾಜ್, ಸೇರಿದಂತೆ ಸಾರ್ವಜನಿಕರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading