ನಾಯಕನಹಟ್ಟಿ:- ಭಾರತೀಯರ ಪಾಲಿಗೆ 80ನೇ ಸ್ವಾತಂತ್ರೋತ್ಸವ ನಾವೆಲ್ಲರೂ ಹಿರಿಯರ ಸೇವೆ ಆದರ್ಶಗಳನ್ನು ಮೈಗೂಡಿಸಿಕೊಂಡು ನವ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ ಎಂದು ನಲಗೇತನಹಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ. ಹೇಳಿದರು.
ಶನಿವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 80ನೇ ಸ್ವಾತಂತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. 80ನೇ ಸ್ವತಂತ್ರ ಮಹೋತ್ಸವ ಕಾರ್ಯಕ್ರಮ ಅತ್ಯಂತ ಮಹತ್ವವಾದ ಮತ್ತು ಹೆಮ್ಮೆಯ ಕಾರ್ಯಕ್ರಮವಾಗಿದ್ದು ಇಂತಹ ಮಹತ್ವಪೂರ್ಣವಾದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ನಾಗರಿಕರು ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿ ಸರ್ದಾರ್ ವಲ್ಲಭಾಯ್ ಪಟೇಲ್, ಕಿತ್ತೂರು ರಾಣಿ ಚೆನ್ನಮ್ಮ ವೀರಸೇನಾನಿ ಸಂಗೊಳ್ಳಿ ರಾಯಣ್ಣ ಡಾ. ಬಿ.ಆರ್. ಅಂಬೇಡ್ಕರ್ ಹೀಗೆ ಅನೇಕ ಮಹನೀಯರು ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಸ್ವತಂತ್ರವನ್ನು ತಂದುಕೊಟ್ಟಿದ್ದಾರೆ ಅವರನ್ನು ಸ್ಮರಿಸುವ ಕೆಲಸವಾಗಬೇಕು ಗ್ರಾಮದ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ ತರವಲ್ಲಿ ಹೆತ್ತವರಿಗೆ ಮತ್ತು ಗ್ರಾಮಕ್ಕೆ ಶಾಲೆಗೆ ಕೀರ್ತಿತರವಾಗಿ ಶಿಕ್ಷಣ ಪಡಿಯಬೇಕು ಎಂದು ಕಿವಿಮಾತು ಹೇಳಿದರು .
ಇದೇ ಸಮಯದಲ್ಲಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಈಗಲೂ ಬೋರಯ್ಯ, ಸದಸ್ಯರಾದ ಪಿ.ಎಂ. ಮುತ್ತಯ್ಯ, ಗ್ರಾಮಸ್ಥರಾದ ಎಸ್. ಜಿ. ಸಣ್ಣ ಬೋರಯ್ಯ, ನಿಂಗರಾಜ್, ಪ್ರಭಾರಿ ಮುಖ್ಯ ಶಿಕ್ಷಕ ಆರ್.ಟಿ. ಸತೀಶ್ ಬಾಬು, ಸಹ ಶಿಕ್ಷಕರಾದ ಎ.ಜೆ. ಸಂಜೀವಿನಿ, ಸುಧಾ ,
ಜಯಚಿತ್ರ, ಶ್ರೀ ರಂಗಮ್ಮ, ಪಿ ರಂಗನಾಯ್ಕ, ಆರ್, ನಿಂಗರಾಜ್, ಡಿ ಗ್ರೂಪ್ ರಾಜಶೇಖರ್, ಮತ್ತು ಗಂಗಾಧರ್, ಅತಿಥಿ ಶಿಕ್ಷಕ- ಶಿಕ್ಷಕರು ಸೇರಿದಂತೆ ಅಂಗನವಾಡಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಮಸ್ತ ನಲಗೇತನಹಟ್ಟಿ ಊರಿನ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.