April 17, 2026
IMG-20260417-WA0296.jpg

ನಾಯಕನಹಟ್ಟಿ :
ಮಾನಸಿಕ ಒತ್ತಡ ಮುಕ್ತ ಬದುಕಿಗೆ ಶ್ರೀ ಸೋಮನಾಥ ಜೋರ್ತಿಲಿಂಗ ದಶನ ಪಡೆಯಬೇಕೆಂದು ಆಟ್‌ ಅಪ್‌ ಲಿವಿಂಗ್‌ ಟೀಚರ್ ಆರ್. ಕವಿತ ಧನ್ವಂತರಿ ಹೇಳಿದರು.

ಗುರುವಾರ ಸಂಜೆ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಮಾತಾನಾಡಿದವರು ಪರಮ ಪೂಜ್ಯ ಶ್ರೀ ಶ್ರೀ ರವಿಶಂಕರ ಗುರುದೇವರವರ ದಿ ಆರ್ಟ್ ಆಫ್ ಲಿವಿಂಗ್ ಅಂತರಾಷ್ಟ್ರೀಯ ಸಂಸ್ಥೆ, 182 ದೇಶಗಳಲ್ಲಿ ಯೋಗ, ಧ್ಯಾನ, ಸತ್ಸಂಗದ ಮೂಲಕ ಮಾನಸಿಕ ಒತ್ತಡ ಮುಕ್ತ ಬದುಕು, ದೈಹಿಕ ಸದೃಢತೆ ಮತ್ತು ಸಂತುಷ್ಟ ಜೀವನವನ್ನು ನಡೆಸಲು ಮನುಕುಲದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದೆ.

ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರಿಂದ ಸಾವಿರ ವರ್ಷಗಳ ನಂತರ ಮೊದಲ ಬಾರಿಗೆ ಸಾರ್ವಜನಿಕ ದರ್ಶನಕ್ಕೆ ಲಭ್ಯವಾಗುವಂತೆ ಮಾಡಲಾದ ಅತ್ಯಂತ ಪೂಜ್ಯ ಶ್ರೀ ಸೋಮನಾಥ ಜ್ಯೋತಿರ್ಲಿಂಗವು ಈಗ ನಮ್ಮ ಚಿತ್ರದುರ್ಗ ಜಿಲ್ಲೆಗೆ ಆಗಮಿಸುತ್ತಿದೆ ಎಂದು ತಿಳಿಸಲು ನಮಗೆ ಅಪಾರ ಸಂತೋಷವಾಗುತ್ತಿದೆ. ನಮ್ಮ ಜಿಲ್ಲೆಯ ಜನರು ಈ ಅಪರೂಪದ ಮತ್ತು ದೈವಿಕ ದರ್ಶನವನ್ನು ಪಡೆಯಲಿ ಎಂದು ಆಶಿಸುತ್ತಾ ನಾವು ಈ ಪತ್ರವನ್ನು ಬರೆಯುತ್ತಿದ್ದೇವೆ.

ಈ ಪವಿತ್ರ ಜ್ಯೋತಿರ್ಲಿಂಗದ ದರ್ಶನ ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದು ಗುರುದೇವ ಶ್ರೀ ಶ್ರೀ ರವಿಶಂಕರರ ಆಶಯ. ಈ ಕಾರ್ಯಕ್ರಮವನ್ನು ನಡೆಸಲು ನಮಗೆ ಅನುಮತಿಯನ್ನು ನೀಡಬೇಕೆಂದು ಮತ್ತು ತಾವು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ವಿನಂತಿಸುತ್ತೆವೆ. ಜನರು ಜ್ಯೋತಿರ್ಲಿಂಗ ದರ್ಶನ ಮಾಡುಬಹುದು,
ಜ್ಯೋತಿರ್ಲಿಂಗಗಳು ಎಂದರೆ ಭಗವಾನ್ ಶಿವನ 12 ಪವಿತ್ರ ದೇವಸ್ಥಾನಗಳು, ಇವು ಭಾರತದೆಲ್ಲೆಡೆ ಇವೆ. ಈ ಸ್ಥಳಗಳಲ್ಲಿ ಶಿವನು ಸ್ವಯಂಭುವಾಗಿ ಪ್ರಕಾಶಮಾನವಾದ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ, ಚಂದ್ರನೇ ಸೃಷ್ಟಿ ಮಾಡಿದ ಅದ್ಬುತ ಲಿಂಗವಾಗಿದೆ,ಲಿಂಗದ ದರ್ಶನದಿಂದ
ಪಾಪ ಕ್ಷಯವಾಗುತ್ತದೆ,
ಜೀವನದಲ್ಲಿ ಶಾಂತಿ ಮತ್ತು ಶಕ್ತಿ ಲಭಿಸುತ್ತದೆ
ಮೋಕ್ಷದ ಮಾರ್ಗವನ್ನು ತೋರಿಸುತ್ತದೆ ಎಂದರು.

ಎಂ.ವೈ.ಟಿ.ಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯೆ ಮಾಜಿ ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಆರ್.ಕವಿತ ಧನ್ವಂತರಿ. ಆಟ್‌ ಅಪ್‌ ಲಿವಿಂಗ್‌ ಟೀಚರ್, ತೇಜಸ್ವಿನಿ ಗುರುರಾಜ್., ಸರ್ವಮಂಗಳ, ಲಲಿತಮ್ಮ ಕರಿಯಣ್ಣ, ಕೆ.ಎಂ.ನಾಗರಾಜ್ ಇನ್ನೂ ಮುತಾಂದವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading