ವರದಿ: ಕೆ.ಟಿ.ಮೋಹನ್ ಕುಮಾರ್
ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಗ್ರಾಮ ದೇವರುಗಳ ಉತ್ಸವವು ಅತ್ಯಂತ ಸಡಗರ, ಭಕ್ತಿ ಭಾವ ಹಾಗೂ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.




ಗ್ರಾಮದ ಹೊರವಲಯದಲ್ಲಿರುವ ಶೀಗವಾಳು ಕೆರೆಯ ಅಂಗಳದಲ್ಲಿ ಗ್ರಾಮ ದೇವತೆ ಶ್ರೀ ಕಾಳಮ್ಮ ತಾಯಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಹರವಮ್ಮ ತಾಯಿ, ಶ್ರೀ ಸತ್ತಿಗಪ್ಪ ಸ್ವಾಮಿ, ಶ್ರೀ ಗಂಗ ಮಾಳಮ್ಮ ತಾಯಿ ದೇವರ ಮೂರ್ತಿಗಳನ್ನು ಶೃಂಗರಿಸಿಕೊಂಡು ಅಡ್ಡ ಪಲ್ಲಕ್ಕಿಗಳಲ್ಲಿ ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಗಳೊಂದಿಗೆ ಗ್ರಾಮಕ್ಕೆ ಕರೆತಂದು ಗ್ರಾಮದೆಲ್ಲೇಡೆ ದೇವರ ಮೂರ್ತಿಗಳ ಉತ್ಸವವನ್ನು ಮಾಡಲಾಯಿತು.
ಈ ದೇವತಾ ಕಾರ್ಯದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದೇವರ ಕಾರ್ಯದಲ್ಲಿ ಗ್ರಾಮದ ಯಜಮಾನರುಗಳು, ಮುಖಂಡರುಗಳು, ಜನಪ್ರತಿನಿಧಿಗಳು, ಯುವಕರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.