ನಾಯಕನಹಟ್ಟಿ-: ಸಮ ಸಮಾಜದ ಕನಸು ಕಂಡವರು ಮತ್ತು ಕತ್ತಲು ತುಂಬಿದ ಜಗತ್ತಿಗೆ ಬೆಳಕು ನೀಡಿದವರು ಬುದ್ಧ ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ತಿಳಿಸಿದರು.


ಶುಕ್ರವಾರ ನಾಯಕನಹಟ್ಟಿ ಸಮೀಪದ ಕುದಾಪುರ ಗ್ರಾಮದ ಬಸವನ ಮಹಮನೆಯಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಬುದ್ಧನ ತತ್ವ ಆದರ್ಶಗಳನ್ನು ಮತ್ತು ಅವರ ಬೋಧನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಭಗವಾನ್ ಬುದ್ಧ ಈ ಜಗತ್ತಿಗೆ ಶಾಂತಿಗ್ ಜ್ಞಾನವನ್ನು ನೀಡಿದಂತ ಮಹಾನ್ ಪುರುಷ ಅವರ ಹಾದಿಯಲ್ಲಿ ನಡೆದರೆ ಮಾತ್ರ ಸಮ ಸಮಾಜದ ನಿರ್ಮಾಣ ಮಾಡಲು ಸಾಧ್ಯ ಎಂದರು.
ಇನ್ನು ಈ ವೇಳೆ ವಕೀಲ ಪರಮೇಶ್ ಮೌರ್ಯ ಮಾತನಾಡಿದರು. ಇಂದಿನ ಅಶಾಂತ ಜಗತ್ತಿಗೆ ಯುದ್ಧದ ಅಗತ್ಯವಿಲ್ಲ ಬದಲಾಗಿ ಬುದ್ಧನ ಶಾಂತಿ ಮತ್ತು ಅಹಿಂಸೆಯ ತತ್ವಗಳು ಅಗತ್ಯವಾಗಿವೆ ನಾವು ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ ಆದರೆ ಬುದ್ಧರು ಕ್ರಿಸ್ತಪೂರ್ವದಲ್ಲಿ ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರಿದಂತವರು ಅವರ ಈ ವಿಚಾರಗಳನ್ನ ಜನರಿಗೆ ತಲುಪಿಸಬೇಕಿದೆ ಬುದ್ಧನ ನುಡಿಯಂತೆ ನಮ್ಮ ದುಃಖಗಳಿಗೆ ಅಜ್ಞಾನ ಮತ್ತು ಅವಿದ್ಯೆಯೇ ಕಾರಣ ಎಂದರು.
ಈ ಸಮಯದಲ್ಲಿ ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಭಗವಾನ್ ಬುದ್ಧರ ಗೀತೆಗಳನ್ನು ಆಡುವ ಮೂಲಕ ಬುದ್ಧರನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕುದಾಪುರ ಗ್ರಾಮ ಪಂಚಾಯತಿ ಸದಸ್ಯ ಪಾಲಯ್ಯ, ಜಿ.ಬಿ. ಲೋಕೇಶ್, ಬೋರಣ್ಣ, ಶ್ರೀಮತಿ ನೇತ್ರಾವತಿ ಜಿ ಬಿ ಉಮೇಶ್, ದಲಿತ ಮಾನವ ಹಕ್ಕುಗಳ ವೇದಿಕೆ ಕರ್ನಾಟಕ ಎಚ್ ಎನ್ ಶಿವಮೂರ್ತಿ ಭೀಮನಕೆರೆ, ಚಳ್ಳಕೆರೆ ಆರೋಗ್ಯ ಇಲಾಖೆ ಎಸ್ ಬಿ ತಿಪ್ಪೇಸ್ವಾಮಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್ ಪ್ರಕಾಶ್, ಬೆಸ್ಕಾಂ ಇಲಾಖೆ ತಿಪ್ಪೇಸ್ವಾಮಿ ಭೀಮನಕೆರೆ, ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ರವಿಕುಮಾರ್ ನನ್ನಿವಾಳ, ಡಿಎಸ್ಎಸ್ ಹೊನ್ನೂರ್ ಸ್ವಾಮಿ, ಸೇರಿದಂತೆ ಬುದ್ಧನ ಅನಿಯಾಯಿಗಳು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.