ನಾಯಕನಹಟ್ಟಿ:- ಸಂಸ್ಕಾರವಂತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯ ಎನ್ನುವುದರ ಜೊತೆಗೆ ಪುರುಷರ ಪಾತ್ರವೂ ಕೂಡ ಅಷ್ಟೇ ಸಮಾನವಾದದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗಡೆಯವರು ಪುರುಷರ ಸಂಘ ಮಾಡುವುದರ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಂ.ವೈ.ಟಿ. ಸ್ವಾಮಿ. ಸಲಹೆ ನೀಡಿದರು.






ಗುರುವಾರ ಪಟ್ಟಣದ ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ನಾಯಕನಹಟ್ಟಿ ವಲಯದಲ್ಲಿ ಆಯೋಜಿಸಿದ್ದ ಕಾವಲು ಆಂಜನೇಯ ಪ್ರಗತಿ ಬಂಧು ಸ್ವಸಹಾಯ ಸಂಘದ 9ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಗುರು- ಹಿರಿಯರನ್ನು ತಂದೆ ತಾಯಿ ರನ್ನು ಪೂಜಿಸುವ ಪ್ರವೃತ್ತಿಯನ್ನು ರೂಢಿಸಿದಾಗ ಮಾತ್ರ ಅಂತಹ ಕುಟುಂಬ ಹಾಗೂ ಮಕ್ಕಳು ಸಮಾಜದಲ್ಲಿ ಆದರ್ಶರಾಗಲು ಸಾಧ್ಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ಮಕ್ಕಳಿಗೆ ಉತ್ತಮ ಜ್ಞಾನ ಕಲ್ಪಿಸುವ ಪ್ರಯತ್ನ ಪ್ರತಿ ತಾಯಂದಿರಲ್ಲಿ ಮೂಡಬೇಕು ಎಂದರು.
ಇದೆ ವೇಳೆ ತಾಲೂಕು ಯೋಜನಾಧಿಕಾರಿ ಜಯಂತ್ ಕುಮಾರ್, ಸಂಘದ ಒಕ್ಕೂಟದ ಅಧ್ಯಕ್ಷ ಅಶೋಕ್ ಕುಮಾರ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದ್ಯಸರ ಎಂ.ವೈ.ಟಿ.ಸ್ವಾಮಿ ,ಕೆ.ಎಂ. ಶಿವಸ್ವಾಮಿ, ರಾಜೇಂದ್ರ, ಹಾಗೂ ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಶ್ರೀಮತಿ ಆರ್.ಎನ್. ಶಶಿಕಲಾ, ಸಂಘದ ಸದ್ಯಸರು ಸ್ಥಳೀಯ ಸೇವಾ ಪ್ರತಿನಿಧಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.